Breaking News

ರವಿ ಬೆಳಗೆರೆ ಬಂಧಿಸದಂತೆ ಹೈಕೋರ್ಟ್ ತಡೆ

Written by 
Published: 06 December 2017
42 times Last modified on Wednesday, 06 December 2017 12:23

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.06;

ರವಿ ಬೆಳಗೆರೆ ಪ್ರಕರಣ ಅಂತಿಮ ಆದೇಶದವರೆಗೂ ಬಂಧನ ಮಾಡದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

'ಹಾಯ್‌ ಬೆಂಗಳೂರು’ ಪತ್ರಿಕೆಯ ಸಂಪಾದಕ ರವಿ ಬೆಳಗರೆ ಮತ್ತು ‘ಯಲಹಂಕ ವಾಯ್ಸ್‌’ ಪತ್ರಿಕೆಯ ಸಂಪಾದಕ ಅನಿಲ್‌ ರಾಜ್‌, ಶಾಸಕರ ವಿರುದ್ಧ ಮಾನನಷ್ಟ ಲೇಖನಗಳನ್ನು ಪ್ರಕಟಿಸಿದ್ದಕ್ಕಾಗಿ ವಿಧಾನಸಭೆಯ ಹಕ್ಕುಬಾಧ್ಯತಾ ಸಮಿತಿಯು ಒಂದು ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡ ವಿಧಿಸಿತ್ತು.

ಈ ಹಿನ್ನೆಲೆಯಲ್ಲಿ ಇಬ್ಬರು ಪತ್ರಕರ್ತರು ಸದನ ಸಮಿತಿ ವಿಧಿಸಿರುವ ಶಿಕ್ಷೆ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ನಂತರ ಈ ಪ್ರಕರಣದ ಮರುಪರಿಶೀಲಿಸುವಂತೆ ವಿಧಾನಸಭೆ ಅಧ್ಯಕ್ಷ ಕೆ.ಬಿ.ಕೋಳಿವಾಡ ಅವರಿಗೆ ಮನವಿ ಸಲ್ಲಿಸಿದ್ದರು.  ಈ ವಿಚಾರವಾಗಿ ಇಂದು ಹೈಕೋರ್ಟ್ ಅಂತಿಮ ಆದೇಶ ಬರುವವರೆಗೂ ರವಿ ಬೆಳಗೆರೆಯನ್ನು ಬಂಧನ ಮಾಡದಂತೆ ಮಧ್ಯಂತರ ಆದೇಶ ನೀಡಿದೆ.

 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770781
Today
Yesterday
This Week
Last Week
This Month
Last Month
All days
5953
14978
20931
3647859
197008
189062
3770781
Your IP: 54.221.76.68
2017-12-18 08:49