Breaking News

ಸಫಾಯಿ ಕರ್ಮಚಾರಿ ಪಿಎಫ್ ಹಣವನ್ನು ಲಪಟಾಯಿಸಿದ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಶೀಘ್ರದಲ್ಲೆ ನೊಟೀಸ್ ಜಾರಿ - ಎಸ್.ಮಾರೆಣ್ಣ

Written by 
Published: 01 December 2017
275 times Last modified on Friday, 01 December 2017 06:43

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಡಿ.01;

ವರದಿ : ಟಿ.ಗಣೇಶ್

ಸಫಾಯಿ ಕರ್ಮಚಾರಿ ಪಿಎಫ್ ಹಣವನ್ನು ಲಪಟಾಯಿಸಿದ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಶೀಘ್ರದಲ್ಲೆ ನೊಟೀಸ್ ಜಾರಿ ಮಾಡಲಾಗುವುದೆಂದು ಎಸ್.ಮಾರೆಣ್ಣ ತಿಳಿಸಿದರು.

ಮಹಾನಗರ ಪಾಲಿಕೆಯ ಸಫಾಯಿ ಕರ್ಮಚಾರಿ ಅವರಿಗೆ ನೀಡುವ ಪಿಎಫ್ ಹಣವನ್ನು 2000 ದಿಂದ 2012ನೇ ಇಸ್ವಿಯವರೆಗೆ ಪಿಎಫ್ ಕಚೇರಿಗೆ ಕಟ್ಟಿರುವುದಾಗಿ ಸುಮಾರು 10ಕೋಟಿ ಹಣವನ್ನು ಲಪಟಾಯಿಸಲು ಪ್ರಯತ್ನಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಆಯೋಗದ ಇತರ ಸದಸ್ಯರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ನೊಟೀಸ್ ನೀಡುವುದಾಗಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಸ್.ಮಾರೆಣ್ಣ ಸ್ಪಷ್ಟಪಡಿಸಿದರು. 

ನಿನ್ನೆ ಬಳ್ಳಾರಿ ಮಹಾನಗರ ಪಾಲಿಕೆಯ ಕಛೇರಿಯಲ್ಲಿ ನಡೆಸಿದ ಸಫಾಯಿ ಕರ್ಮಚಾರಿ ಮತ್ತು ಪಾಲಿಕೆಯ ಅಧಿಕಾರಿಗಳ ಸಭೆಯ ಬಳಿಕ ಸುಧ್ಧಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಸಫಾಯಿ ಕರ್ಮಚಾರಿಗಳಿಗೆ ತಮ್ಮ ಸಂಬಳದಿಂದ ಪಿ.ಎಫ್ ಕಚೇರಿಗೆ ಕಟ್ಟುವ ಹಣವನ್ನು ಕಟ್ಟದೆ ಸುಮಾರು 600 ಜನ ಸಫಾಯಿ ಕಾರ್ಮಿಕರಿಗೆ ಸೇರಿದ ಪ್ರತಿ ಒಬ್ಬರಿಗೆ ತಿಂಗಳಿಗೆ 2ಸಾವಿರ ರೂಗಳಂತೆ ಒಟ್ಟು 7ವರ್ಷಗಳ ಪಿ.ಎಫ್ ಹಣವನ್ನು ನುಂಗಿಹಾಕಿರುವ ಶಂಕೆಯಿಂದ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ನೊಟೀಸ್ ಜಾರಿ ಮಾಡಲಾಗುತ್ತದೆ ಎಂದರು. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770687
Today
Yesterday
This Week
Last Week
This Month
Last Month
All days
5859
14978
20837
3647859
196914
189062
3770687
Your IP: 54.221.76.68
2017-12-18 08:41