Breaking News

ಸಮಾಜದಲ್ಲಿ ಜಾತಿಗಿಂತ ನೀತಿ ಮುಖ್ಯ : ಪ್ರೊ. ಎಸ್.ಎ ಪಾಟೀಲ್

Written by 
Published: 05 October 2017
44 times Last modified on Thursday, 05 October 2017 17:07

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.05;

ವರದಿ : ಟಿ.ಗಣೇಶ್

ಜಾತಿಗಿಂತ ವಿಚಾರಗಳು ಮುಖ್ಯ, ಜಾತಿ ಬಿಡಿ ನೀತಿಯಿಂದ ಇರಿ. ಸಮಾಜಕ್ಕೆ ದೊರೆಯಾಗಿರಿ, ಹೊರೆಯಾಗಬೇಡಿ. ಕಷ್ಟಪಟ್ಟರೆ ಸುಖ ತಾನಾಗಿ ದೊರೆಯುತ್ತದೆ ಎಂದು ಕುಲಸಚಿವರಾದ ಪ್ರೊ. ಎಸ್.ಎ. ಪಾಟೀಲ್ ಹೇಳಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಎಸ್.ಸಿ/ಎಸ್.ಟಿ. ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಾಲ್ಮೀಕಿ ಅವರ ಜೀವನಗಾಥೆ ವಿವರಿಸುತ್ತ, ಜಯಂತಿಗಳ ಆಚರಣೆಗಿಂತ ಒಗ್ಗಟು ಮುಖ್ಯ. ಒಡೆದು ಆಳುವ ನೀತಿ ಬಿಡಬೇಕು, ವ್ಯಕ್ತಿತ್ವ ಬದಲಾವಣೆ ಮಾಡಿಕೊಳ್ಳಲು ಜಯಂತಿಗಳ ಮೂಲಕ ಸಾಧ್ಯವಾಗುತ್ತದೆ. ವಾಲ್ಮೀಕಿ ಅವರು ತಮ್ಮ ಕುಟುಂಬದವರು ಮಾಡುವ ಪಾಪ ಕಾರ್ಯದಲ್ಲಿ ಭಾಗಿಯಾಗಲಿಲ್ಲ ಎಂದು ತಿಳಿಸಿದರು.

ಮನುಷ್ಯ ಯಾವುದೇ ಜಾತಿಗೆ ಸೀಮಿತವಾಗಬಾರದು. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು. ಜಯಂತಿ ಆಚರಣೆ ಪ್ರಾರಂಭದ ನಂತರದ ನೈಜ ಅಭಿವೃದ್ಧಿ ಕುರಿತು ವಿದ್ಯಾರ್ಥಿಗಳು ಪರಾಮರ್ಶಿಸಿಕೊಳ್ಳುವ ಅಗತ್ಯವಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷರಾದ ಕೆ.ಪಿ. ಪಂಪಾಪತಿ ಹೇಳಿದರು.

ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ. ಹೊನ್ನುಸಿದ್ಧಾರ್ಥ ಮಾತನಾಡಿ, ನಮ್ಮ ದೇಶದಲ್ಲಿ 6000 ಜಾತಿ 3000 ಉಪ ಜಾತಿ ಇದೆ. ದೇಶದಲ್ಲಿ ಮೂಲಭೂತವಾಗಿ ಆರ್ಯ ಮತ್ತು ದ್ರಾವಿಡ ಜನಾಂಗ ಮಾತ್ರ ಇದ್ದದ್ದು. ಶಿಕ್ಷಿತ ವರ್ಗ ರಚಿಸಿದ ರಾಮಾಯಣ, ಮಹಾಭಾರತಗಳಲ್ಲಿ ಶೂದ್ರರಿಗೆ ಬೆಲೆ ಇರಲಿಲ್ಲ. ಇಂದು ದಮನಿತ ವರ್ಗದವರು ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ಚರಿತ್ರೆ ಪುನರ್‍ರಚಿಸುವ ತುರ್ತು ಇದೆ ಎಂದರು.

ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ, ಟಿ.ಸುರೇಶ್ ಮಾತನಾಡಿ, ಪ್ರಥಮ ಸಂಸ್ಕøತ ಬರಹಗಾರರು ವಾಲ್ಮೀಕಿ. 24000 ಶ್ಲೋಕಗಳನ್ನು ಒಳಗೊಂಡ ರಾಮಾಯಣ ಕೃತಿ ರಚಿಸಿದ್ದಾರೆ. ವನವಾಸದ ಕಾಲದಲ್ಲಿ ಸೀತೆಗೆ ಆಶ್ರಯಕೊಟ್ಟು ಪೋಷಿಸಿದ್ದಾರೆ. ಎಂದರು.

ಹಣಕಾಸು ಅಧಿಕಾರಿಗಳಾದ ಸುನಿಲ್ ಕುಮಾರ್ ಎಂ.ಎಸ್. ಮಾತನಾಡಿ, ಜಾತಿಗಳ ರಚನೆ ಒಡೆದು ಆಳುವ ರಾಜಕಾರಣದಿಂದ ಸೃಷ್ಟಿಯಾಗಿದೆ. ಜಯಂತಿಗಳು ವಿಚಾರ ಕ್ರಾಂತಿಯ ಬದಲು ಜಾತಿಗಳ ಮಧ್ಯೆ ವಿಭಜನೆಗೆ ಕಾರಣವಾಗುತ್ತಿರುವುದು ವಿಷಾದನೀಯ ಎಂದರು. ಎಸ್‍ಸಿ/ಎಸ್‍ಟಿ ಘಟಕದ ಸಂಯೋಜಕರಾದ ಡಾ. ಕುಮಾರ್ ನಿರ್ವಹಿಸಿದರು ಹಾಗೂ ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770863
Today
Yesterday
This Week
Last Week
This Month
Last Month
All days
6035
14978
21013
3647859
197090
189062
3770863
Your IP: 54.221.76.68
2017-12-18 08:56