Breaking News

ಸಫಾಯಿ ಕರ್ಮಚಾರಿಗಳ ಅಭಿವೃಧ್ಧಿಗೆ 87 ಕೋಟಿ ಮೀಸಲು - ಅಧ್ಯಕ್ಷ ಎಸ್.ಮಾರೆಪ್ಪ

Written by 
Published: 30 November 2017
51 times Last modified on Friday, 01 December 2017 04:51

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಡಿ.01;

ವರದಿ : ಟಿ.ಗಣೇಶ

ಸಫಾಯಿ ಕರ್ಮಚಾರಿಗಳು ವಾಸಿಸುವ ಕಾಲೋನಿಗಳ ಸಮಗ್ರ ಅಭಿವೃದ್ಧಿಗೆ 20 ಕೋಟಿ ಮೀಸಲಿಡಲಾಗಿದೆ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಸ್.ಮಾರೆಪ್ಪ ತಿಳಿಸಿದರು.

ನಿನ್ನೆ ಬಳ್ಳಾರಿ ಮಹಾನಗರ ಪಾಲಿಕಯ ಸಭಾ ಭವನದಲ್ಲಿ ಸಫಾಯಿ ಕರ್ಮಚಾರಿಗಳು ಮತ್ತು ಅಧಿಕಾರಿಗಳ ಸಭೆ ನೆಡೆಸಿದ ಅವರು ರಾಜ್ಯ ಸರ್ಕಾರ ಸಫಾಯಿ ಕರ್ಮಚಾರಿಗಳಿಗೆ ಒಂದು ಆಯೋಗ ರಚನೆ ಮಾಡಿ 2017 ಮತ್ತು 18ನೇ ಸಾಲಿನಲ್ಲಿ ಕರ್ಮಚಾರಿ ಕಾಲೋನಿಗಳಿಗೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲು 20 ಕೋಟಿ ರೂ. ವೆಚ್ಚ ಯೋಜನೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಈ ಯೋಜನೆಗಳಲ್ಲಿ ಸಫಾಯಿ ಕರ್ಮಚಾರಿ ಎಂದು ಗುರುತಿಸಲ್ಪಟ್ಟ ಮ್ಯಾನ್ಯುಯಲ್, ಸ್ಕ್ಯಾವೆಂಜರ್ಸ್, ವಾಸಿಸುತ್ತಿರುವ ಕಾಲೋನಿಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಸಂಬಂಧ ಶುದ್ಧ ಕುಡಿಯುವ ನೀರಿನ ಘಟಕ, ಸಾರ್ವಜನಿಕ ಸಮುದಾಯ ಶೌಚಾಲಯ, ವೈಯಕ್ತಿಕ ಶೌಚಾಲಯ, ಚರಂಡಿ ನಿರ್ಮಾಣ, ಬೀದಿ ದೀಪ, ವಿದ್ಯುತ್ ಸಂಪರ್ಕ, ಎಲ್.ಪಿ.ಜಿ ಸಂಪರ್ಕ, ಸರ್ವ ಋತು ಕಾಂಕ್ರೀಟ್ ರಸ್ತೆಗಳು, ಸಮುದಾಯ ಭವನಗಳು ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಫಾಯಿ ಕರ್ಮಚಾರಿ ಕಾಲೋನಿ ಸಮಗ್ರ ಅಭಿವೃದ್ಧಿ ಯೋಜನೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಸಫಾಯಿ ಕರ್ಮಚಾರಿ ವಸತಿ ಯೋಜನೆಯಲ್ಲಿ:

ನಗರ ಪ್ರದೇಶದಲ್ಲಿ 5.50 ಲಕ್ಷ ಮತ್ತು ಗ್ರಾಮೀಣ ಭಾಗದಲ್ಲಿ 3.5 ಲಕ್ಷ ಸಾಲ ನೀಡಲಾಗುವುದು. ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಫಾಯಿ ಕರ್ಮಚಾರಿಗಳಿಗೆ ಹಳೇ ಮನೆ ರಿಪೇರಿ ಯೋಜನೆಯಲ್ಲಿ ಬೇಡಿಕೆಯ ಅನುಸಾರ 3 ಲಕ್ಷದವರೆಗೆ ನೀಡಲಾಗುವುದು. ನಿವೇಶನ ರಹಿತ ನಿವೇಶನ ಒದಗಿಸಲಾಗುವುದು ಸರ್ಕಾರಿ ಜಮೀನುಗಳನ್ನು ಗುರುತಿಸಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಾಜೀವ್ ಗಾಂಧಿ ಗ್ರಾಮೀಣ ನಿಗಮವು ನಿಗಧಿ ಪಡಿಸಿದ ಮಾರ್ಗಸೂಚಿಗಳಂತೆ ನಿವೇಶನಕ್ಕಾಗಿ ಜಮೀನು ಖರೀದಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಲ್ಲಿ ಅವುಗಳನ್ನು ಪರಿಗಣಿಸಲಾಗುವುದು ಮತ್ತು ಇದಕ್ಕೆ ತಗುಲುವ ವೆಚ್ಚವನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಒದಗಿಸಿದ ಅನುದಾನದಲ್ಲೆ ಭರಿಸಲಾಗುವುದು. ಈ ಚಟುವಟಿಕೆಗೆ 30+3 ಕೋಟಿ ಮೀಸಲು.

ಸಫಾಯಿ ಕರ್ಮಚಾರಿ ಕೌಶಲ್ಯ ಅಭಿವೃದ್ಧಿ ತರಬೇತಿ :

ಕರ್ಮಚಾರಿ ಕುಟುಂಬದ ವ್ಯಕ್ತಿಗಳ ವಿದ್ಯಾಭ್ಯಾಸ ಕಲಿತವರಿಗೆ ಪರ್ಯಾಯ ಉದ್ಯೋಗದ ತರಬೇತಿಯನ್ನು ನೀಡಲಾಗುವುದು. ಪ್ಲಂಭಿಂಗ್, ಎಲೆಕ್ಟ್ರೀಷಿಯನ್, ಸ್ಯಾನಿಟರಿ ವರ್ಕ್ಸ್, ಲಘು ಮತ್ತು ಭಾರೀ ವಾಹನ ಚಾಲನಾ ತರಬೇತಿ ಹೊಂದುವ ಸಂಬಂಧ ಪೌರಕಾರ್ಮಿಕರ ಮಕ್ಕಳಿಗೆ ಕೌಶಲ್ಯ ತರಬೇತಿಗಳನ್ನು ನೀಡಲಾಗುವುದು. ಈ ಚಟುವಟಿಕೆಗೆ 50 ಲಕ್ಷ ಮೀಸಲು.


ಮಲಹೊರುವ ಪದ್ಧತಿ ನಿರ್ಮೂಲನೆ :

ಮಲಹೊರುವ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡುವುದು ಹಾಗೂ ಸಫಾಯಿ ಕರ್ಮಚಾರಿಗಳಿಗೆ ಪರ್ಯಾಯ ಉದ್ಯೋಗದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ವೃತ್ತಿ ಸಂಬಂಧ ಕೌಶಲ್ಯ ಅರಿವು ಮೂಡಿಸಲಾಗುವುದು. ಈ ಚಟುವಟಿಕೆಗೆ 50 ಲಕ್ಷ ಮೀಸಲಿಡಲಾಗಿದೆ.

ವಿಶೇಷ ಪ್ರೋತ್ಸಾಹ ಧನ :

ಸಫಾಯಿ ಕರ್ಮಚಾರಿ ಮಕ್ಕಳಿಗೆ ಎಸ್.ಎಸ್.ಎಲ್.ಸಿ ನಂತರ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ಪ್ರತಿ ವಿದ್ಯಾರ್ಥಿಗೆ ಮಾಸಿಕ 2 ಸಾವಿರ. ಪಿಯುಸಿ, ಐಟಿಐ, ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವವರಿಗೆ ಮತ್ತು ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 3 ಸಾವಿರ ರೂಗಳನ್ನು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 4000 ರೂ, ವೈದ್ಯಕೀಯ ದಂತ ವಿದ್ಯಾರ್ಥಿಗಳಿಗೆ 5000 ರೂಗಳಂತೆ 10 ತಿಂಗಳ ವರೆಗೆ ನಿಗದಿಪಡಿಸಿ ಒಟ್ಟು 25 ಲಕ್ಷ ರೂಗಳನ್ನು ಮೀಸಲಿಡಲಾಗಿದೆ.

ಖಾಸಗಿ ಶಾಲೆಯಲ್ಲಿ ಸೇರಿಸುವುದು :

ಸಫಾಯಿ ಕರ್ಮಚಾರಿ ಮಕ್ಕಳನ್ನು ನಗರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಎಲ್.ಕೆ.ಜಿ.ಯಿಂದ 5ನೇ ತರಗತಿಯವರೆಗೆ ವಸತಿ ರಹಿತ. 6ನೇ ತರಗತಿಯಿಂದ 10ನೇ ತರಗತಿವರೆಗೆ ವಸತಿ ಸಹಿತ ಪ್ರವೇಶ ನೀಡುವುದು. ಇದಕ್ಕಾಗಿ 2 ಕೋಟಿ ಮೀಸಲು ಇಡಲಾಗಿದೆ ಎಂದರು.

ಉದ್ಯೋಗ ಯೋಜನೆ :

ಸಫಾಯಿ ಕರ್ಮಚಾರಿ ಮಕ್ಕಳಿಗೆ ಸ್ವಯಂ ಉದ್ಯೋಗಕ್ಕಾಗಿ 13.50 ಕೋಟಿ ಮೀಸಲಿಡಲಾಗಿದೆ. ಡಾ|| ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಅನುಷ್ಟಾನಗೊಳಿಸುತ್ತಿರುವ ಉದ್ಯಮಶೀಲತೆ ಯೋಜನೆ ಘಟಕ ವೆಚ್ಚಕ್ಕೆ 1 ಲಕ್ಷ ದಿಂದ 5 ಲಕ್ಷ (70% ಅಥವಾ ಗರಿಷ್ಠ 3.5 ಲಕ್ಷ ರೂ, 100 ಫಲಾನುಭವಿಗಳಿಗೆ 2) ಘಟಕ ವೆಚ್ಚ 5 ಲಕ್ಷದಿಂದ 10 ಲಕ್ಷದ ವರೆಗೆ 60% ಗರಿಷ್ಠ 5 ಲಕ್ಷ 100 ಫಲಾನುಭವಿಗಳಿಗೆ, 3) ಘಟಕ ವೆಚ್ಚ ರೂ 10 ಲಕ್ಷದಿಂದ 20 ಲಕ್ಷ 50% ಅಥವಾ ಗರಿಷ್ಠ 5 ಲಕ್ಷ 100 ಫಲಾನುಭವಿಗಳಿಗೆ) ನಿಗಮದಿಂದ ಅರ್ಹ ಫಲಾಪೇಕ್ಷೆಗಳಿಂದ ಅರ್ಜಿಗಳನ್ನು ಪಡೆದು ಆಯ್ಕೆ ಮಾಡಿ ಸಾಲ ಮಂಜೂರಿಗಾಗಿ ಶಿಫಾರಸ್ಸು ಮಾಡಲಾಗುವುದು.

ನೇರಸಾಲ ಯೋಜನೆ :

ಸಫಾಯಿ ಕರ್ಮಚಾರಿಗಳ ಕುಟುಂಬಸ್ಥರಿಗೆ ನೇರ ಸಾಲ ಯೋಜನೆಯಡಿ ಕಿರಾಣಿ ಅಂಗಡಿ, ಹಣ್ಣಿನ ವ್ಯಾಪಾರ, ಹಿಟ್ಟಿನ ಗಿರಣಿ, ತರಕಾರಿ ವ್ಯಾಪಾರ, ಇತ್ಯಾದಿ ವ್ಯಾಪಾರಗಳಿಗೆ 1ಲಕ್ಷದ ವರೆಗೆ ಶೇ.10 ಸಬ್ಸಿಡಿ ಶೇಕಡ 90ರಷ್ಟು ಬ್ಯಾಂಕ್ ಸಾಲ 4% ಬಡ್ಡಿ ದರದಲ್ಲಿ ನೀಡಲಾಗುತ್ತದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ತೇಜು, ಶಕೀಲ್, ರಾಮುಡು ಇತರ ಪಾಲಿಕೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

R.K. Toona

"ಸತ್ಯದ ಹುಡುಕಾಟದಲಿ"

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770791
Today
Yesterday
This Week
Last Week
This Month
Last Month
All days
5963
14978
20941
3647859
197018
189062
3770791
Your IP: 54.221.76.68
2017-12-18 08:49