Breaking News

ಸಂವಾದ ಹಾಗೂ ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮ

Written by 
Published: 03 October 2017
39 times Last modified on Tuesday, 03 October 2017 18:03

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.03;

ವರದಿ : ಟಿ.ಗಣೇಶ್

ಕನ್ನಡ ಹಂಪಿ ವಿವಿಯ ಭುವನವಿಜಯ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಕ್ಷೇಮಪಾಲನಾ ಘಟಕದಿಂದ, ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಪ್ರಯುಕ್ತ, ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಿಂದ "ನಮ್ಮ ಕಣ್ಣಲ್ಲಿ ಗಾಂಧಿ ಸಂವಾದ ಹಾಗೂ ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮ" ವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕುಲಪತಿಗಳಾದ ಡಾ. ಮಲ್ಲಿಕಾ ಎಸ್. ಘಂಟಿ, ಎಸ್.ಸಿ.ಪಿ./ಟಿ.ಎಸ್.ಪಿ. ಹಾಗೂ ರೂಸಾ ಅನುದಾನದ ಅಡಿಯಲ್ಲಿ ಲ್ಯಾಪ್‍ಟಾಪ್ ವಿತರಣೆ ಮಾಡಲಾಗುತ್ತಿದೆ ಎಂದರು. ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಕಾರ್ಖಾನೆಗಳ ಗುಲಾಮರಾಗಬಾರದು ಎಂದು  ಕಳಕಳಿಯಿಂದ ನುಡಿದರು.

ವಿದ್ಯಾರ್ಥಿಗಳು ಶ್ರದ್ಧೆಯಿಂದ ಗ್ರಂಥಾಲಯದ ಉಪಯೋಗ ಹೊಂದಿ ಅನ್ನಕ್ಕೆ ದಾರಿ ಕಂಡುಕೊಳ್ಳುವುದೇ ನನ್ನ ದೃಷ್ಟಿಯಲ್ಲಿ ನಿಜವಾದ ಗಾಂಧಿ ಜಯಂತಿ ಆಗಿದೆ. ನಿಮ್ಮ ಪರಿಸ್ಥಿತಿಗಳು ನಿಮ್ಮನ್ನು ನಿತ್ಯ ಕಾಡಿದರೆ ಮಾತ್ರ ನೀವು ಹುಡುಕಾಟ ಆರಂಭಿಸುತ್ತೀರಿ. ಪುಸ್ತಕಗಳ ಮೂಲಕ ಸಿಗುವ ಅನುಭವವನ್ನು ಸಾರ್ವತ್ರಿಕ ಸತ್ಯ ಎಂದು ಹೇಳಲು ಆಗುವುದಿಲ್ಲ. ತಾತ್ವಿಕತೆ, ನೈತಿಕತೆ ಇಲ್ಲದ ರಾಜಕಾರಣ ನಮ್ಮ ಕನಸುಗಳನ್ನು ನನಸಾಗಲು ಬಿಡುತ್ತಿಲ್ಲ. ತಾತ್ವಿಕ ರಾಜಕಾರಣಕ್ಕೆ ಒತ್ತಾಯ ಮಾಡಬೇಕಾದ ಮನಸ್ಸುಗಳು ಇಂದು ಮೌನಗೊಂಡಿರುವುದು ಖೇದದ ಸಂಗತಿಯಾಗಿದೆ. ಆ ಮನಸ್ಸುಗಳೆಲ್ಲ ವಾಟ್ಸಪ್‍ಗಳಲ್ಲಿ ಕೇಂದ್ರೀಕೃತವಾಗಿವೆ ಎಂದು ವಿಷಾಧಿಸಿದರು.

ಕನ್ನಡ ವಿಶ್ವವಿದ್ಯಾಲಯಕ್ಕೆ ಕನಸುಗಳು, ಜವಾಬ್ದಾರಿಗಳು ಇವೆ. ವಿದ್ಯಾರ್ಥಿಗಳು ನನಸಾಗಿಸಬೇಕು. ಈ ತಲೆಮಾರಿನ ವಿದ್ಯಾರ್ಥಿಗಳು ಗಾಂಧಿಯನ್ನು ಹೇಗೆ ನೋಡುತ್ತಿದ್ದಾರೆ ಎಂಬ ತಿಳುವಳಿಕೆಯನ್ನು ಪಡೆಯುವುದಕ್ಕಾಗಿಯೇ ಸಂಶೋಧನ ವಿದ್ಯಾರ್ಥಿಗಳಿಂದ ಸಂವಾದ ನಡೆಸಲಾಯಿತು. ವ್ಯವಹಾರಕ್ಕೆ ನೈತಿಕತೆಯ ಮೂಗುದಾರ ಹಾಕಲು ಗಾಂಧೀಜಿ ಪ್ರಯತ್ನಿಸಿದರು. ಬಾಟಾ ಚಪ್ಪಲಿ ವ್ಯವಹಾರಕ್ಕೆ ಬಂಡವಾಳ ಹಾಕಿದವರು ಉಚ್ಛಕುಲದವರು. 

ಕಸ ಗೂಡಿಸುವ ಪೊರಕೆ ನಮ್ಮಲ್ಲಿ ದೃಶ್ಯಮಾಧ್ಯಮಗಳ ಮೂಲಕ ಸಾಂಸ್ಕೃತಿಕ ಲೆಕ್ಕಚಾರಗಳನ್ನು ಹುಟ್ಟುಹಾಕುತ್ತಿದೆ. ಹಲವು ಮಿಥ್ಯಗಳು ಸೃಷ್ಟಿಯಾಗುತ್ತಿದೆ. ಈ ಎಲ್ಲವನ್ನು ಮೀರುವ ಶಿಕ್ಷಣವನ್ನು ವಿದ್ಯಾರ್ಥಿಗಳು ಹೊಂದಬೇಕಾಗಿದೆ. ಓದುವ, ಕೇಳುವ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಕುರಿತು  ಮಾತನಾಡುತ್ತ, ಅವರ ಒಂದು ಹೊತ್ತಿನ ಉಪವಾಸ ಇಡೀ ರಾಷ್ಟ್ರಕ್ಕೆ ಭದ್ರತೆ ತಂದುಕೊಟ್ಟಿತ್ತು. ಆದ್ದರಿಂದ ನಾವು ಆಹಾರವನ್ನು ಸದುಪಯೋಗ ಮಾಡಬೇಕಾಗಿದೆ. ರೈತರನ್ನು, ಸೈನಿಕರನ್ನು ನಾವು ಕಾಯ್ದರೆ ಅವರಿಬ್ಬರು ದೇಶವನ್ನೇ ಕಾಯುತ್ತಾರೆ. ಇದನ್ನು ಸಮಾಜ, ದೇಶ ಮತ್ತು ರಾಜಕಾರಣವಾಗಲಿ ಅರ್ಥಮಾಡಿಕೊಂಡಿದ್ದರೆ ಇಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿದ್ದ ಕುಲಸಚಿವರಾದ ಡಾ.ಡಿ. ಪಾಂಡುರಂಗಬಾಬು ಮಾತನಾಡಿ, ಗಾಂಧಿಯನ್ನು ಹೊಸದಾಗಿ ಅನುಸಂಧಾನ ಮಾಡುವ ಸಂದರ್ಭದಲ್ಲಿ ನಾವಿದ್ದೇವೆ. ಗಾಂಧಿಯನ್ನು ವಿಮರ್ಶಿಸಬೇಕಾಗಿದೆ, ಪ್ರಶ್ನಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ನಮ್ಮ ಕಣ್ಣಲ್ಲಿ ಗಾಂಧಿ ಕುರಿತು ಸಂವಾದ ನಡೆಸಿದ ಸಂಶೋಧನಾ ವಿದ್ಯಾರ್ಥಿಗಳಾದ ಕೃಷ್ಣಮೂರ್ತಿ, ತಾಯಶ್ರಿ, ಸಂತೋಷಕುಮಾರ ಜಿ.ಡಿ., ಅಖ್ತರಖಾನಂ, ಮಂಜುನಾಥ, ಹೇಮಾವತಿ ಇವರು ನಮ್ಮ ಕಣ್ಣಲ್ಲಿ ಗಾಂಧಿ ಶೀರ್ಷಿಕೆಯು ಸಂಶೋಧಕರ ದಿಕ್ಕು ಮತ್ತು ಜವಾಬ್ದಾರಿಯನ್ನು ಹೇಳುತ್ತದೆ.

ಗಾಂಧಿಯವರು ಪ್ರಭುತ್ವದ ಕಾನೂನುಗಳಿಗೆ ಸಹಕರಿಸದೇ ಅಸಹಕಾರ ತೋರುತ್ತ ಸ್ವತಂತ್ರ ಹಾದಿಯಲ್ಲಿ ನಡೆದರು. ಭಾರತ ಇಬ್ಭಾಗವಾದಾಗ ಇಡೀ ದೇಶದ ತುಂಬ ಸಂಚರಿಸಿ ಕೋಮು, ಸೌಹರ್ದ ತರಲು ಶ್ರಮಿಸಿದರು. ಅಸಮಾನತೆ, ಶೋಷಣೆ, ಅಸ್ಪೃಶ್ಯತೆ, ಕೋಮುವಾದಗಳ ನಡುವೆ ಗಾಂಧಿಯವರಿಗೆ ರಾಷ್ಟ್ರೀಯತೆಯ ಕಲ್ಪನೆ ಮೂಡಲು ಹೇಗೆ ಸಾಧ್ಯವಾಯಿತು? 2ನೇ ಮಹಾಯುದ್ಧದ ಸಂದರ್ಭದಲ್ಲಿ ಗಾಂಧಿಯವರು ಏಕೆ ಸೈನ್ಯವನ್ನು ಕಳುಹಿಸಿದರು?, ಅವರ ಅಹಿಂಸೆ ಎಲ್ಲಿ ಹೋಯಿತು? ಅವರ ಪತ್ನಿ ನರಳಿ ನರಳಿ ಸಾವನ್ನಪ್ಪಿದ್ದು ಹಿಂಸೆ ಅಲ್ಲವೇ? ಎಂದು ಪ್ರಶ್ನಿಸಿದರು. ಗ್ರಾಮಸ್ವರಾಜ್ ಕಲ್ಪನೆಯ ಮೂಲಕ ರಾಜಕೀಯ ಪ್ರಜ್ಞೆ ಮೂಡಿಸಿದರು.

ಗಾಂಧಿಯವರನ್ನು ಇಂದು ಮತಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಗಾಂಧಿಯ ತತ್ವಗಳಿಗೆ ಬೆಲೆ ಇಲ್ಲ. ಗಾಂಧಿ ಇರುವ ನೋಟುಗಳಿಗೆ ಬೆಲೆ ಇದೆ ಎಂದು ವಿಷಾದಿಸಿದರು. ಧರ್ಮ, ಭಾಷಾತೀತ ವ್ಯಕ್ತಿ ಗಾಂಧಿ. ಮಹಿಳೆ ಅರ್ಧರಾತ್ರಿಯಲ್ಲಿ ನಿರ್ಭಯವಾಗಿ ಓಡಾಡುವಂತಾದರೆ ಅದೇ ಸ್ವಾತಂತ್ರ್ಯ ಎಂದು ಗಾಂಧಿಯವರು ಹೇಳಿದ್ದರು. ಆದರೆ ಇಂದು ಮಹಿಳೆ ಹಗಲಿನಲ್ಲೇ ನಿರ್ಭಯವಾಗಿ ಓಡಾಡಲು ಆಗದ ಪರಿಸ್ಥಿತಿ ಇದೆ ಎಂದು ಸಂವಾದಿಸಿದರು.

ಎಸ್.ಸಿ.ಪಿ./ಟಿ.ಎಸ್.ಪಿ. ಹಾಗೂ ರೂಸಾ ಅನುದಾನದ ಅಡಿಯಲ್ಲಿ 2012ರಿಂದ 2016ರ ವರೆಗಿನ ಕನ್ನಡ ವಿಶ್ವವಿದ್ಯಾಲಯದ ಪಿಎಚ್.ಡಿ. ಆಂತರಿಕ ವಿದ್ಯಾರ್ಥಿಗಳಿಗೆ  ಮತ್ತು ಸಂವಾದಿಸಿದ ವಿದ್ಯಾರ್ಥಿಗಳನ್ನು ಮಾನ್ಯಕುಲಪತಿಯವರು ಗೌರವಿಸಿದರು.

ಹಾಗೂ ಕುಲಸಚಿವರು, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಾದ ರಾಧ ಟಿ., ಬಸವರಾಜ ಕೆ.ಆರ್., ರೇವಯ್ಯ ಆರ್. ಗೋವಿಂದನಾಯ್ಕ, ಲತಾ ಕೆ.ಇ., ಸಂಧ್ಯಾ ಎಚ್.ಎಸ್.

ಪರಿಶಿಷ್ಟ, ಪಂಗಡದಿಂದ ಮಲ್ಲಯ್ಯ ಎಚ್.ಐ, ಕೃಷ್ಣಮೂರ್ತಿ ಕೆ.ಇ., ತ್ರಿವೇಣಿ ಜಿ.ಬಿ, ಸ್ವಾಮಿ ಎಂ., ಅರ್ಚನಾ ಪಿ.ಆರ್. 

ಹಿಂದುಳಿದ ವರ್ಗದ, ಅಖ್ತರ್‍ಖಾನಂ, ಕಾವ್ಯ ಎಂ., ನವೀನಕುಮಾರ ಪಿ, ಗೀತಾ, ಲೋಕೇಶ ಇವರಿಗೆ ಸಾಂಕೇತಿಕವಾಗಿ ಲ್ಯಾಪ್‍ಟಾಪ್‍ಗಳನ್ನು ವಿತರಿಸಿದರು.

ಸಾಧ್ಯವಾದಷ್ಟು ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿಕೊಂಡು ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್‍ಟಾಪ್‍ಗಳನ್ನು ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ಮಾನ್ಯಕುಲಪತಿಯವರು ತಿಳಿಸಿದರು.

ಕ್ಷೇಮಪಾಲನಾಧಿಕಾರಿಯಾದ ಡಾ.ಶಿವಾನಂದ ಎಸ್. ವಿರಕ್ತಮಠ ಸ್ವಾಗತಿಸಿ, ಪ್ರಾಸ್ತವಿಕ ನುಡಿದರು.

ಡಾ.ವೀರೇಶ ಜಾನೇಕಲ್ ನಿರೂಪಿಸಿ, ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವೇದಿಕೆಯ ಮೇಲಿನ ಗಣ್ಯರು ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3274019
Today
Yesterday
This Week
Last Week
This Month
Last Month
All days
2540
6468
22862
3222209
98509
263209
3274019
Your IP: 54.158.55.5
2017-10-18 09:19