Breaking News

ಶಸ್ತ್ರಚಿಕಿತ್ಸೆಗೊಳಗಾದವರಿಗೆ ಕೊಂಡ್ಲಹಳ್ಳಿಯ ವೈದ್ಯರಿಂದ ಪರೀಕ್ಷೆ

Written by 
Published: 21 November 2017
29 times Last modified on Tuesday, 21 November 2017 15:25

ಕೆ.ಎನ್.ಪಿ.ವಾರ್ತೆ, ದಾವಣಗೆರೆ,ನ.21;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ನೇತ್ರ ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳನ್ನು ಇಂದು ಎಂ.ಆರ್.ಟಿ. ಗ್ರಾಮಾಂತರ ಕಣ್ಣಿನ ಆಸ್ಪತ್ರೆ ಕೊಂಡ್ಲಹಳ್ಳಿಯ ವೈದ್ಯರ ತಂಡವು ಪ್ರೇರಣಾ ಚರ್ಚ್ ನಲ್ಲಿ  ಪರೀಕ್ಷಿಸಿದರು.

ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ಪ್ರೇರಣಾ ಸಮಾಜ ಸೇವಾ ಸಂಸ್ಥೆ ಹಾಗೂ ತಾಲೂಕು ಹಿರಿಯ ನಾಗರಿಕ ಸಂಘದ ವತಿಯಿಂದ ಕಳೆದ ತಿಂಗಳು ಉಚಿತ ನೇತ್ರ ಶಿಬಿರದಲ್ಲಿ  ಸುಮಾರು  60 ಜನರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು. 

ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳನ್ನು ವೈದ್ಯರು ಇಂದು ಪರೀಕ್ಷಿಸಿದರು. ಈ ವೇಳೆ ಮಾತನಾಡಿದ ಚಿಕಿತ್ಸೆ ಪಡೆದುಕೊಂಡ  ಬಸಣ್ಣ ಅವರು ನಮಗೆ ಪ್ರೇರಣಾ ಸಮಾಜ ಸೇವಾ ಸಂಸ್ಥೆಯಿಂದ ಉಚಿತವಾಗಿ ನೇತ್ರ ಶಸ್ತ್ರಚಿಕಿತ್ಸೆಯನ್ನು ಮಾಡಿದರು.

ನಮ್ಮಲ್ಲಿ ಯಾವುದೇ ರೀತಿಯ ಹಣವನ್ನು ಪಡೆಯದೆ ಉಚಿತವಾಗಿ ಮಾಡಲಾಯಿತು. ಕೆಲವು ಉಚಿತ ಶಿಬಿರಗಳಲ್ಲಿ ತಪಾಸಣೆ ಮಾಡಿ ಚಿಕಿತ್ಸೆ ಮಾಡಲು ಹಣವನ್ನು ಪಡೆಯುತ್ತಾರೆ. ಅದರೆ ಇಂತಹ ಶಿಬಿರಗಳಿಂದ ಬಡವರಿಗೂ ಮತ್ತು ವೃದ್ದೆಯರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ.ಆರ್. ರಂಗನಾಥ್ , ಡಾ. ಕಂಬಣ್ಣ , ಡಾ. ತಿಪ್ಪೇಸ್ವಾಮಿ , ಚರ್ಚಿನ ಫಾದರ್ ಐವನ್ , ಸಂತೋಷ  ಸೇರಿದಂತೆ ಇತರರು ಹಾಜರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770823
Today
Yesterday
This Week
Last Week
This Month
Last Month
All days
5995
14978
20973
3647859
197050
189062
3770823
Your IP: 54.221.76.68
2017-12-18 08:52