Breaking News

ಶೇ.15ರಷ್ಟು ಘನತ್ಯಾಜ್ಯ ಉಪಕರ : ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಪ್ರತಿಭಟನೆ

Written by 
Published: 28 November 2017
21 times Last modified on Tuesday, 28 November 2017 09:42
ಸಂಗ್ರಹ ಚಿತ್ರ ಸಂಗ್ರಹ ಚಿತ್ರ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.28;

ಶೇ.15ರಷ್ಟು ಘನತ್ಯಾಜ್ಯ ಉಪಕರ ವಿಧಿಸಲು ಮುಂದಾಗಿರುವ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು.

ಬಿಜೆಪಿ ಸದಸ್ಯರು ಕೈಗೆ ಕಪ್ಪು ಪಟ್ಟಿ ಧರಿಸಿ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪದ್ಮನಾಭ ರೆಡ್ಡಿ ಮಾತನಾಡಿ, 2011ರಲ್ಲೇ ಕಸಕ್ಕೆ ಸೆಸ್ ವಿಧಿಸಲಾಗಿದೆ. ಇತ್ತೀಚೆಗೆ ಆಸ್ತಿ ತೆರಿಗೆಯನ್ನು ಸಹ ಹೆಚ್ಚಿಸಲಾಗಿದೆ. ಇದು ಸಾಲದೆಂಬಂತೆ ಮತ್ತೆ ಆಸ್ತಿ ತೆರಿಗೆ ಮೇಲೆ ಘನತ್ಯಾಜ್ಯ ನಿರ್ವಹಣೆ ಉಪಕರವನ್ನು ವಿಧಿಸುವ ಮೂಲಕ ಸುಲಿಗೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಈಗಾಗಲೇ ಹಲವು ಸೆಸ್‍ಗಳನ್ನು ನಾಗರಿಕರು ಕಟ್ಟುತ್ತಿದ್ದಾರೆ. ಇದೇ ಬಹಳಷ್ಟು ಹೊರೆಯಾಗಿದೆ. ಇದಲ್ಲದೇ ಈಗ ಮತ್ತೆ ಶೇ.15ರಷ್ಟು ಉಪಕರ ಹಾಕಿದರೆ ಅವರಿಗೆ ಹೊರಲಾರದಷ್ಟು ಭಾರವಾಗಲಿದೆ. ಕೂಡಲೇ ಈ ನಿರ್ದಾರವನ್ನು ಕೈ ಬಿಡಬೇಕು. ಇಲ್ಲದಿದ್ದರೆ ಕೌನ್ಸಿಲ್ ಹೊರಗೆ ಮತ್ತು ಒಳಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೆಡ್ಡಿ ಎಚ್ಚರಿಸಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770816
Today
Yesterday
This Week
Last Week
This Month
Last Month
All days
5988
14978
20966
3647859
197043
189062
3770816
Your IP: 54.221.76.68
2017-12-18 08:52