Breaking News

ಶ್ರೀಘ್ರದಲ್ಲಿಯೇ ಕಿವುಡುತನ ಮತ್ತು ತೊದಲು ಮಾತು ಸಮಸ್ಯೆಗೆ ಚಿಕಿತ್ಸಾ ತರಬೇತಿ ಪ್ರಾರಂಭ

Written by 
Published: 30 November 2017
71 times Last modified on Friday, 01 December 2017 04:53

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಡಿ.01;

ವರದಿ : ಟಿ.ಗಣೇಶ

ಬಳ್ಳಾರಿ ನಗರದಲ್ಲಿ ಶ್ರೀಘ್ರದಲ್ಲಿಯೇ ಕಿವುಡುತನ ಮತ್ತು ತೊದಲು ಮಾತು ಸಮಸ್ಯೆಗೆ ಚಿಕಿತ್ಸಾ ತರಬೇತಿ ಪ್ರಾರಂಭವಾಗಲಿದೆ. 

ಶ್ರವಣ ಎಜುಕೇಷನ್ ಟ್ರಸ್ಟ್ ವತಿಯಿಂದ ಕಿವಿ, ತೊದಲು ಮಾತು ಚಿಕಿತ್ಸೆ ತರಬೇತಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವು ನಾಳೆ ಜರುಗಲಿದೆ. ಪ್ರಥಮ ಬಾರಿಗೆ ಕಿವಿ ಮತ್ತು ತೊದಲು ಮಾತುಗಳನ್ನು ಸರಿಪಡಿಸುವ ಶಿಕ್ಷಣ ತರಬೇತಿ ಕಾಲೇಜು ಬಳ್ಳಾರಿ ನಗರದಲ್ಲಿ ಪ್ರಾರಂಭವಾಗಲಿದೆ.

ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಸಂತೋಷ್‍ಲಾಡ್ ಅವರಿಂದ ಉದ್ಘಾಟನೆ ಮಾಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಎಚ್.ರಾಘವೇಂದ್ರ ಪ್ರಸಾದ್ ತಿಳಿಸಿದರು. ನಿನ್ನೆ ನಗರದ ಶ್ರವಣ ಎಜುಕೇಷನ್ ಟ್ರಸ್ಟನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಳ್ಳಾರಿ ನಗರದಲ್ಲಿ ಸುಮಾರು 5 ವರ್ಷಗಳಿಂದ ಕ್ಲಿನಿಕ್ ಹಂತದಲ್ಲಿ ಪ್ರಾರಂಭವಾದ ನಮ್ಮ ಸಂಸ್ಥೆ, ಇಲ್ಲಿನ ಜನರ ಸಮಸ್ಯೆಗಳನ್ನು ತಿಳಿದು ಇಲ್ಲಿ ಒಂದು ತರಬೇತಿ ಕಾಲೇಜು ನಿರ್ಮಿಸಲು ತೀರ್ಮಾನಿಸಿತು. ಇಲ್ಲಿನ ಸುತ್ತಮುತ್ತಲಿನ ಜಿಲ್ಲೆಯ ಕೊಪ್ಪಳ, ಸಂಡೂರು, ಬಳ್ಳಾರಿ, ಕಂಪ್ಲಿ, ಕಲಬುರಗಿ ಈ ಭಾಗದ ಜನರು ಹೆಚ್ಚಾಗಿ ಈ ಕಿವುಡುತನ, ತೊದಲು ಮಾತುಗಳಿಂದ ಬಳಲುತ್ತಿದ್ದಾರೆ ಎಂದು ತಿಳಿದ ಸಂಸ್ಥೆಯು ಈ ತರಬೇತಿ ಕೇಂದ್ರವನ್ನು ಬಳ್ಳಾರಿಯಲ್ಲಿಯೇ ಸ್ಥಾಪಿಸಬೇಕೆಂದು ನಿರ್ಧರಿಸಿದೆ.

ಇದು ಒಂದು ಖಾಸಗಿ ಸಂಸ್ಥೆಯಾಗಿದ್ದು ಇದರಲ್ಲಿ ತರಬೇತಿ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳು ದ್ವಿತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡ 50 ರಿಂದ 70% ಅಂಕಗಳಿಂದ ಪಾಸಾಗಿರಬೇಕು ಎಂದು ತಿಳಿಸಿದರು. ಈ ತರಬೇತಿಯು 4 ವರ್ಷದ್ದಾಗಿದ್ದು, 3 ವರ್ಷ ಕಾಲೇಜಿನಲ್ಲಿ ಒಂದು ವರ್ಷ ಆಸ್ಪತ್ರೆಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರು ಹಾಜರಿದ್ದರು.

R.K. Toona

"ಸತ್ಯದ ಹುಡುಕಾಟದಲಿ"

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770847
Today
Yesterday
This Week
Last Week
This Month
Last Month
All days
6019
14978
20997
3647859
197074
189062
3770847
Your IP: 54.221.76.68
2017-12-18 08:55