Breaking News

ಶಿಕ್ಷಕಿಯ ಪರ್ಸ್ ಹಾಗೂ ಮೊಬೈಲ್ ಕಸಿದು ಪರಾರಿಯಾದ ಅಪರಿಚಿತ

Written by 
Published: 28 November 2017
38 times Last modified on Tuesday, 28 November 2017 12:32

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ನ.28;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಅಪರಿಚಿತನೋರ್ವ ಶಿಕ್ಷಕಿಯ ಪರ್ಸ್ ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದಾನೆ.

ಹಾಡಹಗಲೆ ಅಪರಿಚಿತ ವ್ಯಕ್ತಿಯೊಬ್ಬ ಹಿಂಬದಿಯಿಂದ ಬಂದು, ಅಂಗನವಾಡಿ ಶಿಕ್ಷಕಿಯಾದ ಚಂದ್ರವತಿಯ ಪರ್ಸ್ ಹಾಗೂ ಸುಮಾರು 10ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಕಸಿದು ಪರಾರಿ ಆದ ಘಟನೆ ಜಗಳೂರು ಪಟ್ಟಣದ ಅಲ್ಪಸಂಖ್ಯಾತ ಮೆಟ್ರಿಕ್ ಬಾಲಕರ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿ ಸಂಭವಿಸಿದೆ. ನಿನ್ನೆ ಜಿಡ್ಡಿ ಕೆರೆ ಅಂಗನವಾಡಿಯಿಂದ ಇನ್ನೊಂದು ಅಂಗನವಾಡಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಶಿಕ್ಷಕಿ ಸ್ಥಳದಲ್ಲಿ ನಿಂತು ಕೂಗಾಡಿದಾಗ ಹತ್ತಿರದಲ್ಲಿದ್ದ ಹಾಸ್ಟೆಲ್ ವಿದ್ಯಾರ್ಥಿಗಳು ಅವನನ್ನು ಹಿಡಿಯಲು ಹೋಗಿದ್ದಾರೆ. ಆದರೆ ಅವನು ಕೆರೆ ಅಂಗಳದಲ್ಲಿ ಬೆಳೆದಿರುವ ಜಾಲಿ ಗಿಡಗಳ ಮಧ್ಯೆಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಒಟ್ಟಾರೆ ಪೋಲೀಸರ ನಿದ್ದೆ ಕೆಡಿಸಿದ ಕಳ್ಳರು ಒಂದೇ ತಿಂಗಳಿನಲ್ಲಿ 3 ಬಾರಿ ಕಳ್ಳತನ ಮಾಡಿದ್ದಾರೆ. ಈ ಕುರಿತು ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770705
Today
Yesterday
This Week
Last Week
This Month
Last Month
All days
5877
14978
20855
3647859
196932
189062
3770705
Your IP: 54.221.76.68
2017-12-18 08:42