Breaking News

ಶಿಕ್ಷಣದ ಖಾಸಗೀಕರಣ ವಿರೋಧಿಸಿ ಧರಣಿ

Written by 
Published: 03 January 2018
46 times Last modified on Wednesday, 03 January 2018 17:15
ಪ್ರತಿಭಟನೆ ನೆಡೆಸುತ್ತಿರುವ ಚಿತ್ರ ಪ್ರತಿಭಟನೆ ನೆಡೆಸುತ್ತಿರುವ ಚಿತ್ರ

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜ.03;

ವರದಿ : ಟಿ.ಗಣೇಶ

ಸರ್ಕಾರದ ಶಿಕ್ಷಣ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಧರಣಿ ದಲಿತ ಸಂಘಟನೆಯಿಂದ ಧರಣಿ ನಡೆಸಲಾಯಿತು.

ಶಿಕ್ಷಣದ ಖಾಸಗೀಕರಣದ ಎಲ್ಲಾ ವಿಧಾನಗಳನ್ನು ಈ ಕೂಡಲೇ ಕೈಬಿಡ ಬೇಕು ಎಂದು ಬಳ್ಳಾರಿಯಲ್ಲಿ ದಲಿತ ಸಂಘರ್ಷ ಸಮಿತಿಯವರು ಧರಣಿ ನಡೆಸಿದರು. ಈ ವೇಳೆ ಮಹಾನ್ ಚೇತನ ಅಕ್ಷರದವ್ವ ಸಾವಿತ್ರಿ ಬಾಪುಲೆಯವರ ಜನ್ಮದಿನಾಚರಣೆ ಅಂಗವಾಗಿ ಧರಣಿ ನಿರತರು ಸಾವಿತ್ರಿ ಬಾಪುಲೆಯವರನ್ನು ನೆನೆದರು.

ದಲಿತ ಲೇಖಕಿ ಎನ್.ಡಿ. ವೆಂಕಮ್ಮ ಮಾತನಾಡಿ, ದಲಿತರು ಹಿಂದುಳಿದವರ ಮಹಿಳೆಯರ ಶಿಕ್ಷಣದ ಹಕ್ಕಿನ ಸಾರ್ವತ್ರಿಕ ಧ್ವನಿಯನ್ನೇ ಮೊಳಗಿಸಿದರು. ಸಾರ್ವತ್ರಿಕ ಶಿಕ್ಷಣದ ಅನೇಕ ಹಂತಗಳು ಜಾರಿಗೆ ಬಂದಿತ್ತಾದರೂ. ಏಕರೂಪದ ಉಚಿತ ಕಡ್ಡಾಯ ಗುಣಾತ್ಮಕ ಸಮಾನ ಶಿಕ್ಷಣ ಜಾರಿಗೆ ಬರಲೇ ಇಲ್ಲ ಎಂದರು.

ಬುಧವಾರ ನಗರದ ಜಿಲ್ಲಾಧಿಕಾರಿ ಕಛೇರಿಯ ಮುಂದೆ ನೂರಾರು ದಲಿತ ಕಾರ್ಯಕರ್ತರು, ಮುಖಂಡರು ಸೇರಿ ಸರ್ಕಾರ ನಮ್ಮ ಹಕ್ಕೋತ್ತಾಯಗಳನ್ನು ಕೂಡಲೆ ಜಾರಿಗೆ ತರಬೇಕು ಮತ್ತು ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಬೇಕು. ಅಲ್ಲದೇ ಎಲ್ಲಾ ರಾಜಕೀಯ, ಸರ್ಕಾರಿ ಅಧಿಕಾರಿಗಳ ಮಕ್ಕಳನ್ನು ಸರ್ಕಾರಿ ಶಾಲೆಗಳ ಮೂಲಕವೇ ಶಿಕ್ಷಣ ನೀಡಬೇಕು. ಎಲ್ಲಾ ಶಾಲೆ ಕಾಲೇಜುಗಳಲ್ಲಿ ಒಂದೇ ವಿಧವಾದ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು ಎಂದು ಧರಣಿ ನಿರತರು. ತಮ್ಮ ಬೇಡಿಕೆಗಳನ್ನು ಜಾರಿಗೆ ತರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬೇಡಿಕೆಗಳು:

* ಪ್ರೋ.ಎಸ್.ಜಿ. ಸಿದ್ಧರಾಮಯ್ಯ ನವರ ಅಧ್ಯಕ್ಷರಾಗಿರುವ ಸರ್ಕಾರಿ ಶಾಲಾ ಸಬಲೀಕರಣ  ಸಮಿತಿ-2017 ವರದಿಯನ್ನು ಕೂಡಲೇ ಜಾರಿಗೆ ತರಬೇಕು.

* ಸಮಿತಿ ವರದಿಯಲ್ಲಿ ಹೇಳಿರುವ ಶಿಫಾರಸ್ಸು(1, 2, 4, 6, 7, 9, 10, 12, 13, 14, 15, 16, 18, 19, 21) ಈ ಕೂಡಲೇ ಜಾರಿಗೊಳಿಸಬೇಕು.

* ಸಾವಿತ್ರಿ ಬಾ ಪುಲೆಯವರ ಜನ್ಮದಿನವನ್ನು ಶಾಲೆಗಳಲ್ಲಿ ಆಚರಿಸಲು ಸರ್ಕಾರ ಘೋಷಿಸಬೇಕು.

* ಈ ವರ್ಷದಿಂದಲೇ 3 ರಿಂದ 6 ವರ್ಷದ ಮಕ್ಕಳಿಗಾಗಿ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಬೇಕು.

* ಹೊಸ ಶಿಕ್ಷಣ ನೀತಿ ರೂಪಿಸಲು ಕೂಡಲೇ ಸಮಿತಿ ರಚಿಸಬೇಕು.

* ಸರ್ಕಾರಿ ಹುದ್ದೆ, ಸರ್ಕಾರಿ ಸವಲತ್ತು ರಾಜಕೀಯ ಸ್ಥಾನಮಾನ ಪಡೆದ ಎಲ್ಲಾ ಕುಟುಂಬದವರು ಅವರ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವುದನ್ನು ಕಡ್ಡಾಯಗೊಳಿಸಬೇಕು.

* ಶಿಕ್ಷಣದ ಖಾಸಗೀಕರಣದ ಎಲ್ಲಾ ವಿಧಾನಗಳನ್ನು ಈ ಕೂಡಲೇ ಕೈಬಿಡಬೇಕು.

* ಕನ್ನಡ ಭಾಷಾ ಮಾಧ್ಯಮದೊಂದಿಗೆ ಪ್ರಾಥಮಿಕ ಹಂತದಿಂದಲೇ ಉತ್ತಮ ಇಂಗ್ಲೀಷ್ ಭಾಷೆ ಕಲಿಕೆಯನ್ನು ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕು.

ಈ ಸಂದರ್ಭದಲ್ಲಿ ದಲಿತ ಲೇಖಕಿ ಎನ್.ಡಿ.ವೆಂಕಮ್ಮ, ಹೆಚ್.ಲಾಲೆಪ್ಪ, ಕುಮಾರಸ್ವಾಮಿ ಬಿ.ಡಿ.ಹಳ್ಳಿ, ಹೆಚ್.ಶೇಖಪ್ಪ, ಗಂಗಪ್ಪ ವಕೀಲರು, ಹನುಮಂತಪ್ಪ, ತಿಪ್ಪೇಸ್ವಾಮಿ, ತಾಲೂಕು ಸಂಚಾಲಕರು ಗಾದಿಲಿಂಗಪ್ಪ, ಆನಂದ್ ಕುಮಾರ್, ವಿಶ್ವನಾಥ, ಫ್ರಾನ್ಸಿಸ್, ಶೇಕ್ಷಾವಲಿ, ಪ್ರಕಾಶ್, ಯಂಕಪ್ಪ, ರಾಚೋಟಪ್ಪ, ತಿಪ್ಪೇಸ್ವಾಮಿ, ಆಂಜಿನೇಯ, ಪರಶುರಾಮ, ನಾಗಲಿಂಗಪ್ಪ, ಓಂಕಾರಪ್ಪ, ನಾಗರಾಜ, ರಾಮಚಂದ್ರಪ್ಪ, ಈರಪ್ಪ, ಚಂದ್ರ ನಾಗರಾಜ, ಸುಮನ್, ಎರ್ರಿಸ್ವಾಮಿ, ರಮೇಶ, ಕುಮಾರ್, ರವೀಂದ್ರ, ಸಿದ್ದಪ್ಪ, ಮಾರೇಶ ಹಾಗೂ ಮುಂತಾದವರು ಉಪಸ್ಥಿತರಿದ್ದರು. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250479
Today
Yesterday
This Week
Last Week
This Month
Last Month
All days
9886
16742
76207
4062809
281574
395132
4250479
Your IP: 54.234.190.237
2018-01-18 15:57