Breaking News

ಶ್ರೀ ಕೆಂಧೋಳೆ ರಾಮಣ್ಣ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

Written by 
Published: 13 January 2018
48 times Last modified on Saturday, 13 January 2018 17:11

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜ.13;

ವರದಿ : ಎಂ.ಡಿ.ಮಾಟ್ರಂಗಿ

ಶ್ರೀ ಕೆಂಧೋಳೆ ರಾಮಣ್ಣ ಶಾಲೆಯಲ್ಲಿ ರಾಷ್ಡ್ರೀಯ ಯುವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಇಂದು ನಗರದ ಶ್ರೀ ಕೆಂಧೋಳೆ ರಾಮಣ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 155ನೇ ಜನುಮದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸರ ಉಡುಪುಗಳನ್ನು ಧರಿಸಿದ ಮಕ್ಕಳು ವಿಶೇಷ ಗಮನ ಸೆಳೆದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಹೆಚ್.ಮದ್ದಾನೆಪ್ಪ ರವರು ಮಾತನಾಡಿ,  ನಿನ್ನೆ ನಡೆಯಬೇಕಿದ್ದ ವಿವೇಕಾನಂದರ ಜಯಂತಿ ಕಾರ್ಯಕ್ರಮವು ಅನಿವಾರ್ಯ ಕಾರಣದಿಂದ ಇಂದು ನಡೆಸುತ್ತಿದ್ದೇವೆ. ಸ್ವಾಮಿವಿವೇಕಾನಂದರ ಜನುಮದಿನವನ್ನು ಈ ಬಾರಿ ಅಂತರ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತಿರುವುದು ಅತ್ಯಂತ ಖುಷಿ ತಂದಿದೆ. ಇದು ಇಡೀ ಭಾರತಕ್ಕೆ ಹೆಮ್ಮೆಯ ವಿಷಯ. ವಿವೇಕಾನಂದರು ಅಂತರರಾಷ್ಟ್ರೀಯ ಮಟ್ಟದ ಧರ್ಮ ಸಮ್ಮೇಳನಗಳಲ್ಲಿ ಭಾಗವಹಿಸಿ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ.  ಅಂತಹ ಮಹನೀಯರ ತತ್ವ ಆದರ್ಶಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕೆಂದು ಮಕ್ಕಳಿಗೆ ಕರೆ ನೀಡಿದರು.

ಇದೇ ವೇಳೆ ಶಾಲೆಯ ಪೂರ್ವಪ್ರಾಥಮಿಕ ತರಗತಿಯ ಮಕ್ಕಳು ವಿವಿಧ ತರಕಾರಿಗಳ ಉಡುಪುಗಳನ್ನು ಧರಿಸಿ, ದಿನನಿತ್ಯ ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುವುದೆಂದು ಅತ್ಯಂತ್ಯ ಮುಗ್ಧತೆಯಿಂದ ಅಭಿನಯಿಸಿದರು. ಜೊತೆಗೆ ಸ್ವಾಮಿವಿವೇಕಾನಂದ ಮತ್ತು  ರಾಮಕೃಷ್ಣ ಪರಮಹಂಸರ ವೇಷಧಾರಿಗಳಿಗೆ ಶಾಲೆಯ ಾಡಳಿತ ಮಂಡಳಿಯಿಂದ ಉಡುಗೊರೆ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿದರು.

ಈ ವೇಳೆ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೃಷ್ಣ ಕೆಂಧೋಳೆ, ಜಂಟಿ ಕಾರ್ಯದರ್ಶಿ ಡಾ.ಗಣೇಶ ರಾವ್, ಕೆಂಧೋಳೆ  ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರುಗಳು ಸಾಜಿ, ಪಾಲಕ ಪ್ರತಿನಿದಿಯಾಗಿ ರಾಘವೇಂದ್ರ ಮತ್ತು ಶ್ರೀಮತಿ ಶರಣಮ್ಮ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250596
Today
Yesterday
This Week
Last Week
This Month
Last Month
All days
10003
16742
76324
4062809
281691
395132
4250596
Your IP: 54.234.190.237
2018-01-18 16:04