Breaking News

ಸಿದ್ದಾರೂಢ ಮಠಕ್ಕೆ ಆಗಮಿಸಿದ ನಟಿ ಕಾಜೋಲ್

Written by 
Published: 30 November 2017
39 times Last modified on Thursday, 30 November 2017 12:13

ಕೆ.ಎನ್.ಪಿ.ವಾರ್ತೆ,ಹುಬ್ಬಳ್ಳಿ,ನ.30;

ಬಾಲಿವುಡ್ ನಟಿ ಕಾಜೋಲ್ ಹಾಗೂ ಅವರ ಕುಟುಂಬ ಸದಸ್ಯರು ಹುಬ್ಬಳ್ಳಿಯಲ್ಲಿರುವ ಸಿದ್ಧಾರೂಢ ಮಠಕ್ಕೆ ಇಂದು ಭೇಟಿ ನೀಡಿ ಸಿದ್ಧಾರೂಢ ಸ್ವಾಮಿ ಗದ್ದುಗೆಯ ದರ್ಶನ ಪಡೆದರು.

ತಾಯಿ ತನುಜಾ ಮುಖರ್ಜಿ, ತಂಗಿ ತನಿಷಾ, ಮಗ ಯೋಗಿ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ನಟಿ ಕಾಜೋಲ್ ಸಿದ್ದಾರೂಢ ಶ್ರೀಗಳ ಗದ್ದುಗೆಗೆ ವಿಶೇಷ ಅಭಿಷೇಕ ಮಾಡಿಸಿದರು. 

ನಂತರ ಕೆಲಕಾಲ ಕುಳಿತು ಧ್ಯಾನ ಮಾಡಿದರು. ಸಿದ್ಧಾರೂಢ ಮಠದ ದರ್ಶನಕ್ಕಾಗಿ ವಿಶೇಷ ವಿಮಾನದಲ್ಲಿ ಕಾಜೋಲ್ ಕುಟುಂಬ ಸದಸ್ಯರು ಆಗಮಿಸಿದ್ದರು. ಕಾಜೋಲ್ ಕುಟುಂಬದವರು ಸಿದ್ಧಾರೂಢ ಸ್ವಾಮೀಜಿಯ ಭಕ್ತರಾಗಿದ್ದಾರೆ. ಇನ್ನು ಬಾಲಿವುಡ್ ನಟಿ ಕಾಜೋಲ್ ಬರುತ್ತಿರುವ ವಿಷಯ ತಿಳಿದ ಜನರು ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770715
Today
Yesterday
This Week
Last Week
This Month
Last Month
All days
5887
14978
20865
3647859
196942
189062
3770715
Your IP: 54.221.76.68
2017-12-18 08:43