Breaking News

ಸಿರಿಗನ್ನಡವೇದಿಕೆ ತಾಲೂಕ ಘಟಕದ ಪದಾಧಿಕಾರಿಗಳ ಪದಗ್ರಹಣ

Written by 
Published: 07 January 2018
118 times Last modified on Monday, 08 January 2018 05:00

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜ.08;

ಸಿರಿಗನ್ನಡವೇದಿಕೆ ನೂತನ ತಾಲೂಕ ಘಟಕ ಪ್ರಾರಂಭಗೊಂಡಿದ್ದು, ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿತು.

ನಿನ್ನೆ ಸ್ಥಳೀಯ ಪರಿವೀಕ್ಷಣ ಮಂದಿರದಲ್ಲಿ ಸಿರಿಗನ್ನಡವೇದಿಕೆ ನೂತನ ತಾಲೂಕ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಈ ವೇಳೆ ಹಿರಿಯ ಸಾಹಿತಿ ನಿಜಲಿಂಗಪ್ಪ ಮೆಣಸಗಿಯವರು ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಕನ್ನಡ ನೆಲ, ಜಲ, ಭಾಷೆ ನಮ್ಮೆಲ್ಲರ ಹೊಣೆಯಾಗಿದ್ದು, ಎಲ್ಲರೂ ಕನ್ನಡ ತಾಯಿಯ ಸೇವೆಯಲ್ಲಿ ಪಾಲ್ಗೂಳ್ಳಬೇಕು. ಸಾಹಿತ್ಯದಲ್ಲಿ ಯಾರು ಸ್ಪರ್ಧಾಮನೊಭಾವನೆ (ನಾನು ಹೆಚ್ಚಿಗೆ ತಿಳಿದುಕೊಂಡವ ಎಂಬ ಜಂಬ) ಬೆಳಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ, ಶರಣಪ್ಪ ಮೆಟ್ರಿ, ನಾಗರಾಜ ಅಂಗಡಿ, ಹನುಮಂತಪ್ಪ ಡಗ್ಗಿ, ಬಾಬುಸಾಬ ಮೆಲ್ಗಡೆ, ಮಂಜುನಾಥ ಗುಡ್ಲಾನೂರು, ಬಸವರಾಜ ಹೆರೂರು, ಕರಿಸಿದ್ದನಗೌಡ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆ ಪದಾಧಿಕಾರಿಗಳನ್ನು ಜಿಲ್ಲಾ ಅಧ್ಯಕ್ಷರಾದ ಜಿ.ಎಸ್.ಗೋನಾಳರ ಮಾರ್ಗದರ್ಶನದಂತೆ ಗೌರವ ಅಧ್ಯಕ್ಷರಾಗಿ ಅರಳಿ ನಾಗಭೂಷಣ, ಅಧ್ಯಕ್ಷರಾಗಿ ಶರಣಪ್ಪ ತಳ್ಳಿ , ಪ್ರಧಾನಕಾರ್ಯದರ್ಶಿಗಳಾಗಿ ಶಿಕ್ಷಕ ಮೈಲಾರಪ್ಪ ಬೂದಿಹಾಳ, ಖಜಾಂಚಿಯಾಗಿ ಯಲ್ಲಪ್ಪ ಕಲಾಲ್ ಅವರನ್ನು ಆಯ್ಕೆ ಮಾಡಿ, ಪದಗ್ರಹಣ ಕಾರ್ಯ ಮಾಡಲಾಯಿತು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250572
Today
Yesterday
This Week
Last Week
This Month
Last Month
All days
9979
16742
76300
4062809
281667
395132
4250572
Your IP: 54.234.190.237
2018-01-18 16:02