Breaking News

ಟಾರ್ಗೆಟ್ ಗ್ರೂಪ್ ನ ಕುಖ್ಯಾತ ರೌಡಿ ಇಲ್ಯಾಸ್ ಹತ್ಯೆ

Written by 
Published: 13 January 2018
43 times Last modified on Saturday, 13 January 2018 07:32

ಕೆ.ಎನ್.ಪಿ.ವಾರ್ತೆ,ಮಂಗಳೂರು,ಜ.13;

ಟಾರ್ಗೆಟ್ ಗ್ರೂಪ್ ನ ನಟೋರಿಯಸ್ ರೌಡಿ ಇಲ್ಯಾಸ್ ನನ್ನು ಇಂದು ಬೆಳಿಗ್ಗೆ  ಬರ್ಬರವಾಗಿ ಹತ್ಯೆಗೈಯಲಾಗಿದೆ.

ನಗರದ ಜಪ್ಪಿನಮೊಗರಿನ ಕುದ್ಪಾಡಿಯಲ್ಲಿ, ಉಳ್ಳಾಲದ ಟಾರ್ಗೆಟ್ ಗ್ರೂಪ್ ನ ನಟೋರಿಯಸ್ ರೌಡಿಯಾಗಿದ್ದ ಇಲ್ಯಾಸ್ (31) ನನ್ನು ಬೆಳಿಗ್ಗೆ 9 ಗಂಟೆ ಸುಮಾರಿಗೆ ಕೊಲೆ ಮಾಡಲಾಗಿದೆ. ಕೊಲೆ ಯತ್ನ ಪ್ರಕರಣದಲ್ಲಿ ರೌಡಿ ಇಲ್ಯಾಸ್ (31) ಎರಡು ದಿನಗಳ ಹಿಂದೆ, ಜಾಮೀನು ಪಡೆದುಕೊಂಡು ಜೈಲಿನಿಂದ ಹೊರ ಬಂದಿದ್ದ. 

ಉಳ್ಳಾಲದ ಟಾರ್ಗೆಟ್ ಗ್ರೂಪ್ ರೂವಾರಿ ಹಾಗೂ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಇಲ್ಯಾಸ್ ಮಲಗಿದ್ದ ಜಾಗಕ್ಕೆ ನುಗ್ಗಿದ ಇಬ್ಬರು ಆಗಂತುಕರು ಚಾಕುವಿನಿಂದ ಇರಿದು, ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ಪಾಂಡೇಶ್ವರ ಪೊಲೀಸರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ, ಆಹಾರ ಸಚಿವ ಯು.ಟಿ ಖಾದರ್ ಜೊತೆ ಇಲ್ಯಾಸ್ ಕಾಣಿಸಿಕೊಂಡಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250598
Today
Yesterday
This Week
Last Week
This Month
Last Month
All days
10005
16742
76326
4062809
281693
395132
4250598
Your IP: 54.234.190.237
2018-01-18 16:04