Breaking News

ತಾತ್ಕಾಲಿಕ ಶೆಡ್ ನಿರ್ಮಾಣದ ಭರವಸೆ

Written by 
Published: 28 November 2017
26 times Last modified on Tuesday, 28 November 2017 12:28

ಕೆ.ಎನ್.ಪಿ.ವಾರ್ತೆ,ಹೊಸಪೇಟೆ,ನ.28;

ವರದಿ : ರಾಮಕೃಷ್ಣ

ನೂತನ ತರಕಾರಿ ಮಾರುಕಟ್ಟೆ ನಿರ್ಮಾಣ ಆಗುವವರೆಗೂ ವ್ಯಾಪಾರಿಗಳಿಗೆ ಶಾಸಕ ಆನಂದ್ ಸಿಂಗ್ ತಾತ್ಕಾಲಿಕ ಮಾರುಕಟ್ಟೆ ಶೆಡ್ ‌ನಿರ್ಮಿಸುವ ಭರವಸೆ ನೀಡಿದರು.

ನಗರದ ನೂತನ ತರಕಾರಿ ಮಾರುಕಟ್ಟೆ ನಿರ್ಮಾಣದ ಹಿನ್ನಲೆ ನಿನ್ನೆ ಹಳೇ ತರಕಾರಿ ಮಾರುಕಟ್ಟೆಯಲ್ಲಿನ ಅಂಗಡಿಗಳನ್ನು ನಗರಸಭೆಯಿಂದ ತೆರವು ಮಾಡಲು ಅಧಿಕಾರಿಗಳು ಮುಂದಾದರು. ಇದರಿಂದ ವ್ಯಾಪಾರಿಗಳು ಅತಂತ್ರ ಸ್ಥಿತಿಗೆ ತಲುಪಿದ್ದು, ಅಧಿಕಾರಿಗಳ ಈ ಕ್ರಮದಿಂದ ಆರ್ಥಿಕ ಮುಗ್ಗಟ್ಟಿಗೆ ಸಿಲುಕುವಂತಾಗಿದೆ. ಈ ವೇಳೆ ಗೊಂದಲಕ್ಕೆ ಸಿಲುಕಿದ್ದ ವ್ಯಾಪಾರಿಗಳ ನೆರವಿಗೆ ಬಂದ ಆನಂದ್ ಸಿಂಗ್ ತಾತ್ಕಾಲಿಕ ಶೆಡ್ ನಿರ್ಮಿಸುವ ಭರವಸೆ ನೀಡಿ ನೂರಾರು ಕುಟುಂಬಗಳು ಬೀದಿಗೆ ಬೀಳುವುದನ್ನು ತಪ್ಪಿಸಿದರು.

ಮತ್ತೊಂದೆಡೆ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನು ಕಮಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅಲ್ಲಿಯ ಸ್ಥಿತಿಗತಿ ತೋರಿಸಿದರು. ಕೂಡಲೇ ಕಟ್ಟಡದ ದುರಸ್ತೆ, ಕಾಂಪೌಂಡ್ ನಿರ್ಮಾಣ ಮತ್ತು ಹೆಚ್ಚುವರಿ ವೈದ್ಯರ ನಿಯೋಜನೆ ಮಾಡುವಂತೆ ಮನವಿ ಮಾಡಿದರು. ಸ್ಥಳದಲ್ಲಿಯೇ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ರಮೇಶ್ ಕುಮಾರ್ ಶೀಘ್ರವಾಗಿ ಆಸ್ಪತ್ರೆ ದುರಸ್ತೆ ಮಾಡುವ ಭರವಸೆ ನೀಡಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770834
Today
Yesterday
This Week
Last Week
This Month
Last Month
All days
6006
14978
20984
3647859
197061
189062
3770834
Your IP: 54.221.76.68
2017-12-18 08:53