Breaking News

ಉಚ್ಚಂಗಿದುರ್ಗದಲ್ಲಿ ಬನ್ನಿ ಉತ್ಸವ

Written by 
Published: 01 October 2017
35 times Last modified on Sunday, 01 October 2017 06:37

ವರದಿ : ಬಸವರಾಜ್ ಪೂಜಾರ್

ಕೆ.ಎನ್.ಪಿ.ವಾರ್ತೆ,ಉಚ್ಚಂಗಿದುರ್ಗ,ಅ.01;

ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಐತಿಹಾಸಿಕ ಮತ್ತು ಧಾರ್ಮಿಕ ಪ್ರಸಿದ್ಧಿ ಹೊಂದಿರುವ ಕ್ಷೇತ್ರವಾದ  ಉಚ್ಚಂಗಿದುರ್ಗದಲ್ಲಿ ಬನ್ನಿ ಉತ್ಸವ ನಿನ್ನೆ ಜರುಗಿತು.

ಉಚ್ಚಂಗಿದುರ್ಗ ಕ್ಷೇತ್ರದ ಕುರಿತು :

ಉಚ್ಚಂಗಿದುರ್ಗವೂ ಬೆಟ್ಟದ ಮೇಲಿದ್ದು ಇಲ್ಲಿ ಶಕ್ತಿ ದೇವತೆಯಾದ ಉಚ್ಚಂಗೆಮ್ಮ ನೆಲೆಸಿರುತ್ತಾಳೆ. ಶಕ್ತಿ ದೇವತೆ ಉಚ್ಚಂಗೆಮ್ಮ ಇಲ್ಲಿ ನೆಲೆಸಿ ಬಂದ ಭಕ್ತರ ಕಷ್ಟಗಳನ್ನು ಈಡೇರಿಸುವುದರಿಂದ ಪ್ರತಿ ಹುಣ್ಣಿಮೆಗೆ ಲಕ್ಷಾಂತರ ಜನ ಹಾಗೂ ಅಮಾವಾಸ್ಯೆ, ಶುಕ್ರವಾರ, ಮಂಗಳವಾರದಂದು ಸಾವಿರಾರು ಜನ ದೇವಿಯ ದರ್ಶನಕ್ಕೆಂದು ಬರುತ್ತಾರೆ. ದಸರಾ ಹಬ್ಬದ ನಿಮ್ಮಿತ್ಯ ವಿಶೇಷ ಪೂಜೆಗಳು ಇರುತ್ತವೆ.

ಸೆ.21, ಗುರುವಾರದಿಂದ ವಿಜಯದಶಮಿಯವರೆಗೆ ಅನೇಕ ವಿಶೇಷ ಪೂಜೆಗಳು ಇರುತ್ತವೆ. ಮೊದಲನೇ ದಿನ ದೇವಿ ಉಚ್ಚಂಗೆಮ್ಮ ಘಟ ಸ್ಥಾಪನೆ ಮಾಡಿ ದೀಪ ಹಾಕಿ ದಸರಾ ಆರಂಭವಾಗುತ್ತದೆ. ಹೂವಿನ ಅಲಂಕಾರ, ಸಿಂಹದ ಮೇಲಿನ ದೇವಿ ಕುಳಿತ ಪೂಜೆ, ವಿವಿಧ ಹಣ್ಣಿನ ಪೂಜೆ ,  ಹತ್ತಿ ಪೂಜೆ ,ತೆಂಗಿನಕಾಯಿ ಪೂಜೆ, ರುದ್ರಾಕ್ಷಿ ಪೂಜೆ ನಡೆಯುತ್ತದೆ. ದುರ್ಗಾಷ್ಟಮಿ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ ಪೂಜೆ ಇರುತ್ತದೆ. ಈ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆಗಳು ನಡೆದು.

ನಂತರ ನಿನ್ನೆ ಸಾಯಂಕಾಲ ಐದು ಗಂಟೆಗೆ ವಿವಿಧ ವಾದ್ಯಗಳ ಮೂಲಕ ಭಕ್ತರ ಉದೋ ಉದೋ ಎನ್ನುವ ಘೋಷದೊಂದಿಗೆ ದೇವಿಯ ಉತ್ಸವ ಮೂರ್ತಿಯ ಪಲ್ಲಕ್ಕಿಯು ಕೋಟೆಯಲ್ಲಿರುವ  ಬನ್ನಿಮಂಟಪಕ್ಕೆ ಹೋಗುತ್ತದೆ. ಹೋದ ನಂತರ ಭಕ್ತರ ಸಮ್ಮುಖದಲ್ಲಿ ದೇವಿಯ ಬಾವುಟ ಹರಾಜು ನಡೆಯುತ್ತದೆ. ಬಾವುಟವನ್ನು ಸೀನಪ್ಪಳ ಭೀಮಪ್ಪ 1ಲಕ್ಷ 10 ಸಾವಿರಕ್ಕೆ ಹರಾಜು ಮಾಡಿಕೊಂಡರು.

ಬನ್ನಿ ಉತ್ಸವ :  ಬನ್ನಿ ಮಂಟಪಕ್ಕೆ ಹೋದ ನಂತರ ಅಲ್ಲಿ ಬನ್ನಿ ಉತ್ಸವ ನಡೆಯುತ್ತದೆ. ಬನ್ನಿ ಉತ್ಸವ ಎಂದರೆ ಎಲ್ಲ ಭಕ್ತರ ಸಮ್ಮುಖದಲ್ಲಿ ದೇವಿಯ ಅರ್ಚಕರು ಬಿಲ್ಲಿನಿಂದ ಭಾಣವನ್ನು ಬನ್ನಿ ಮರದ ಕಡೆ ಹೊಡೆಯುತ್ತಾರೆ.

ಅಂಬು ಬೆಸೆಯುವುದು (ಬಿಲ್ಲಿನಿಂದ ಬಾಣವನ್ನು ಹೊಡೆಯುವುದು )ರ ವಿಶೇಷ :  ಹಿಂದಿನ ಕಾಲದಲ್ಲಿ ಶುಂಬ ,ನಿಶುಂಬ ,ಮಹೀಶಾಸುರ ಎನ್ನುವ ರಾಕ್ಷಸರ ಕಿರುಕುಳ ಜಾಸ್ತಿಯಾದಾಗ ದೇವಿಯು ಅ ರಾಕ್ಷಸರನ್ನು ಸಂಹಾರ ಮಾಡಿ ವಿಜಯ ಹೊಂದಿದ್ದರಿಂದ ವಿಜಯದಶಮಿ ದಿನ ಅಂಬು ಬೆಸೆಯುವುದು  ಬಹಳ ಪುರಾತನ ಕಾಲದಿಂದ ನಡೆದುಕೊಂಡು ಬಂದಿದೆ. ಅಲ್ಲಿ ನೆರೆದಿರುವ ಭಕ್ತರಲ್ಲಿ ಕೆಲವರು ಬನ್ನಿಯನ್ನು ಕಿತ್ತು ಎಲ್ಲ ಭಕ್ತರಿಗೆ ಕೊಡುತ್ತಾರೆ.

ದೇವಿಗೆ ಬನ್ನಿಯನ್ನು ಹಾಕಿ ಸುಖ ,ಶಾಂತಿ ,ಮಳೆ, ಬೆಳೆ ಕೊಡಮ್ಮ ಎಂದು ದೇವಿಯನ್ನು ಬೇಡಿಕೊಂಡು, ಎಲ್ಲರೂ ಬನ್ನಿಯನ್ನು ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಕೊಟ್ಟು, ನಿಮ್ಮ ಬಾಳು ಬಂಗಾರವಾಗಲಿ ಎಂದು ಶುಭಾಶಯ ಕೋರುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ.

ಈ ಸಂದರ್ಭದಲ್ಲಿ ಊರಿನ ಎಲ್ಲ ಗ್ರಾಮಸ್ಥರು, ಮುಜರಾಯಿ ಇಲಾಖೆ ರಮೇಶ, ಸಿಬ್ಬಂದಿಗಳು, ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆಂಚಪ್ಪ, ಸದಸ್ಯ ಬೀರಪ್ಪ, ಶಿವಕುಮಾರ್ ಸ್ವಾಮಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುರುಡಿ ಗಂಗಮ್ಮ ಮಂಜಪ್ಪ ,ತಾಲ್ಲೂಕ್ ಪಂಚಾಯತ್ ಸದಸ್ಯ ಕೆಂಚನ ಗೌಡ್ರು ,ಭಕ್ತರೂ ಇದ್ದರೂ. ಅಲ್ಲದೆ ಉಚ್ಚಂಗಿದುರ್ಗ ಪುರವರ್ಗ ಕಟ್ಟಿಮನಿ ಸ್ಥಿರ ,ಚರ ,ಪೀಠಾಧ್ಯಕ್ಷರಾದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿಗಳೂ ಬನ್ನಿ ಉತ್ಸವದಲ್ಲಿ ಭಾಗವಹಿಸಿದ್ದರು. ಅಲ್ಲದೆ ನಿನ್ನೆ ಶ್ರೀ ಮಠದಲ್ಲಿ ವಿವಿಧ ಪೂಜೆಗಳನ್ನು ಸ್ವಾಮೀಜಿ ಮಾಡುವ ಜೊತೆಗೆ ಅನ್ನ ಸಂತರ್ಪಣೆಯನ್ನು ಸಹ ಮಾಡಿದ್ದರು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3278815
Today
Yesterday
This Week
Last Week
This Month
Last Month
All days
1010
6326
27658
3222209
103305
263209
3278815
Your IP: 54.80.236.48
2017-10-19 03:22