Breaking News

ಉಚ್ಚಂಗಿದುರ್ಗದಲ್ಲಿ ನಡೆದ ಬನದ ಹುಣ್ಣಿಮೆ

Written by 
Published: 02 January 2018
46 times Last modified on Tuesday, 02 January 2018 12:28

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ.02;

ವರದಿ : ಬಸವರಾಜ್ ಪೂಜಾರ್

ಉಚ್ಚಂಗಿದುರ್ಗದಲ್ಲಿ ಬನದ ಹುಣ್ಣಿಮೆ ಅದ್ದೂರಿಯಾಗಿ ನಡೆಯಿತು.

ಹರಪನಹಳ್ಳಿ ತಾಲ್ಲೂಕ್ ಉಚ್ಚಂಗಿದುರ್ಗದಲ್ಲಿ ಬನದ ಹುಣ್ಣಿಮೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಹಿನ್ನೆಲೆಯಲ್ಲಿ ದೇವಿಯ ಪಲ್ಲಕ್ಕಿಯು ಗಂಗೆ ಪೂಜೆಗೆಂದು ಅನೆಹೊಂಡಕ್ಕೆ ಹೋಗಿ ಬಂದಿತು. ಬರುವಾಗ ಜನರು ಪಲ್ಲಕ್ಕಿಯ ಅಡಿಯಲ್ಲಿ ಕುಳಿತು ದೇವಿಯ ಆಶೀರ್ವಾದ ಪಡೆದರು.

ಈ ಹುಣ್ಣಿಮೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ದೇವಿಯ ದರ್ಶನಕ್ಕೆಂದು ಆಗಮಿಸಿದ ಸಾವಿರಾರು ಭಕ್ತರು, ಗುಡ್ಡ ಹತ್ತುವಾಗ ಬರುವ ಮೆಟ್ಟಿಲುಗಳಿಗೆ ಪೂಜೆ ಮಾಡುತ್ತ, ಉಚ್ಚಂಗೆಮ್ಮ ನಿನ್ನಾಲ್ಕು ಉಧೋ... ಉಧೋ...  ಎಂಬ ಭಕ್ತಿಯ ಬಾವೋದ್ಘೋಷದೊಂದಿಗೆ ಸಾಲು ಸಾಲಾಗಿ ಬೆಟ್ಟ ಏರಿ, ದೇವಿಯ ದರ್ಶನ ಪಡೆದರು. 

ಅಲ್ಲದೆ ಈ ಸಂದರ್ಭದಲ್ಲಿ ಉಚ್ಚಂಗಿದುರ್ಗ ಪುರವರ್ಗ ಮಠದ ರೇವಣಸಿದ್ದ ಸ್ವಾಮೀಜಿ ಗುಡ್ಡಕ್ಕೆ ಬಂದು ದೇವಿಯ ದರ್ಶನ ಪಡೆದರು. ಮುನ್ನೆಚ್ಚರಿಕೆ ಕ್ರಮವಾಗಿ, ಪ್ರಾಥಮಿಕ ಅರೋಗ್ಯ ಕೇಂದ್ರ ಉಚ್ಚಂಗಿದುರ್ಗದ ವತಿಯಿಂದ ತಾತ್ಕಾಲಿಕ ಅರೋಗ್ಯ ಕೇಂದ್ರ ವ್ಯವಸ್ಥೆ ಮಾಡಲಾಗಿತ್ತು, ಗುಡ್ಡ ಹತ್ತಿ ಬರುವ ಭಕ್ತರು ತಮಗೆ ಬೇಕಾದ  ಮಾತ್ರೆ ಪಡೆದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250357
Today
Yesterday
This Week
Last Week
This Month
Last Month
All days
9764
16742
76085
4062809
281452
395132
4250357
Your IP: 54.234.190.237
2018-01-18 15:51