Breaking News

ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ

Written by 
Published: 16 December 2017
75 times Last modified on Saturday, 16 December 2017 14:19

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಡಿ.16;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಇಂದು ಚಾಲನೆ ದೊರೆಯಿತು.

 ಜಿಲ್ಲೆಯ ಜಗಳೂರು ಪಟ್ಟಣದ ಪ್ರೇರಣಾ ಚರ್ಚ್ ಆವರಣದಲ್ಲಿ ಇಂದು ಪ್ರೇರಣಾ ಸಮಾಜ ಸೇವಾ ಸಂಸ್ಥೆ( ಚರ್ಚ್ ) ಹಾಗೂ ಹಿರಿಯ ನಾಗರಿಕರ ಸಂಘ , ಆಲ್ ಫಾತಿಮ  ಸಂಸ್ಥೆ , ಲಯನ್ಸ್ ಮತ್ತು ಲಯನೆಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು  ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಗ್ರೇಡ್2 ತಹಶಿಲ್ದಾರ್ ದಿವಾಕರ್ ರೆಡ್ಡಿ ಅವರು ಗಿಡಕ್ಕೆ ನೀರೆರೆಯುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮನುಷ್ಯನಿಗೆ ಐಶ್ವರ್ಯಗಿಂತ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ  ಭಾರತ ಸಂಸ್ಕೃತಿಯ ಆಹಾರ ಪದ್ದತಿಗಳನ್ನು ಮರೆತು ಪಿಜಾ, ಬರ್ಗರ್ ದಂತಹ ಆಹಾರ ತಿಂದು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.

ಈ ಶಿಬಿರದಲ್ಲಿ ಯೆನಪೊಯ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ವೈದ್ಯರ ತಂಡದವರು ರೋಗಿಗಳ ತಪಾಸಣೆ ಮಾಡಿದರು. ಈ ಸಂದರ್ಭದಲ್ಲಿ ಪುಷ್ಪ ಲಕ್ಷ್ಮಣ್, ಫಾದರ್ ವಿಲಿಯಂ ಮಿರಾಂದ, ಫಾದರ್ ಡಾ. ಆರ್ಚಿಬಾಲ್ಡ್ , ಫಾದರ್ ಡಾ. ಆ್ಯಂಥೊಣಿ , ಹಿರಿಯ ನಾಗರೀಕರ ಸಂಘದ ಅಧ್ಯಕ್ಷ ವಿಠಲ್ ಶ್ರೇಷ್ಠಿ, ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಹಿನ ಬೇಗಂ, ಅಲ್ ಫಾತಿಮ ಸಂಸ್ಥೆ ನಿರ್ದೇಶಕ ಶಂಶುದಿನ್, ಡಾ.ಇಬ್ರಾಹಿಮ್ ನಾಗನೂರು, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಮುರಳಿಧರ್, ಡಾ.ಪಿ.ಎಸ್.ಅರವಿಂದ್ ಸೇರಿದಂತೆ ಇತರರು ಹಾಜರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250459
Today
Yesterday
This Week
Last Week
This Month
Last Month
All days
9866
16742
76187
4062809
281554
395132
4250459
Your IP: 54.234.190.237
2018-01-18 15:56