Breaking News

ಉಚಿತ ಫ್ಲೋರೋಸಿಸ್ ತಪಾಸಣಾ ಶಿಬಿರ

Written by 
Published: 11 January 2018
29 times Last modified on Friday, 12 January 2018 15:16

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ.12;

ವರದಿ : ಬಸವರಾಜ್ ಪೂಜಾರ್

ಉಚಿತ ಫ್ಲೋರೋಸಿಸ್ ತಪಾಸಣಾ ಶಿಬಿರವು ಜರುಗಿತು.

ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಉಚಿತ ಫ್ಲೋರೋಸಿಸ್ ತಪಾಸಣಾ ಶಿಬಿರವು, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹರಪನಹಳ್ಳಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ತಾಲ್ಲೂಕು ವೈಧ್ಯಾಧಿಕಾರಿ ರೇಣುಕಾರಾಧ್ಯ ಉದ್ಘಾಟನೆ ಮಾಡಿದರು. ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ತಜ್ಞ ವೈದ್ಯರುಗಳು ಹಾಗೂ  ಉಚ್ಚಂಗಿದುರ್ಗದ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರದ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. ಈ ಶಿಬಿರದಲ್ಲಿ ನೀರಿನಿಂದ ಬರುವ ಫ್ಲೋರೋಸಿಸ್ ರೋಗದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ಇಂದಿನ ಕಾಲದಲ್ಲಿ ಅಂತರ್ಜಲದ ಮಟ್ಟ ಕಡಿಮೆಯಾಗಿ ಬಹಳ ಆಳದಲ್ಲಿ ನೀರು ಸಿಗುವುದರಿಂದ ಫ್ಲೋರೆಡ್ ಅಂಶ ಜಾಸ್ತಿಯಾಗಿ ಮನುಷ್ಯರಿಗೆ ಕಾಲು, ಕೈ ನೋವುಗಳು ಬರುತ್ತಿರುವುದರಿಂದ ಇದನ್ನು ತಡೆಯುವುದು ಅನಿವಾರ್ಯವಾಗಿದೆ.

ಪ್ಲೋರೋಸಿಸ್ ಕಾಯಿಲೆಗೆ ತುತ್ತಾಗಿರುವವರನ್ನು ಸರ್ಕಾರವೇ ಗುರುತಿಸಿ, ಸೂಕ್ತ ಚಿಕಿತ್ಸೆ ಕೊಡಿಸುತ್ತದೆ ಎಂದು ತಾಲ್ಲೂಕು ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಭುವನೇಶ್ವರಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿಗಳಾದ ರೇಣುಕಾರಾಧ್ಯ, ನೀವು ಶುದ್ಧವಾದ ನೀರನ್ನು ಕುಡಿಯುವ ಮೂಲಕ ಪ್ಲೊರೋಸಿಸ್ ರೋಗದಿಂದ ಮುಕ್ತಿ ಹೊಂದಿ ಎಂದು ಹೇಳಿದರು.

ನಂತರ ಜಿಲ್ಲಾ ಪಂಚಾಯತಿ ಸದಸ್ಯರಾದ ರಶ್ಮಿ ರಾಜಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಕೀಲುಮೂಳೆ ತಜ್ಞರು ಹಾಗೂ ದಂತ ವೈದ್ಯಾಧಿಕಾರಿಗಳು  ರೋಗಿಗಳನ್ನು ಪರೀಕ್ಷಿಸಿ, ಕಾಯಿಲೆಗೆ ಸಂಬಂಧಿಸಿದ ಮಾತ್ರೆಗಳನ್ನು ವಿತರಿಸಿದರು.

ಪ್ಲೋರೋಸಿಸ್  ರೋಗವನ್ನು  ತಡೆಗಟ್ಟುವುದು ಹಾಗೂ ಫ್ಲೋರೋಸಿಸ್ ಬಂದಂತಹ ಜನರ ವರದಿ ತಯಾರು ಮಾಡಿ ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಅರಿವನ್ನು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ

ಈ ಸಂದರ್ಭದಲ್ಲಿ ತಾಲ್ಲೂಕು ಅರೋಗ್ಯ ಅಧಿಕಾರಿಗಳಾದ ರೇಣುಕಾರಾಧ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಶ್ಮಿ, ವೈದ್ಯರಾದ ಪ್ರಸನ್ನ ಹಾಗೂ ಕೀಲುಮೂಳೆ ತಜ್ನರಾದ ಮಲ್ಲೇಶ್ ಹಾಗೂ ದಂತ ವೈದ್ಯರಾದ ಪ್ರಸನ್ನ, ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಭುವನೇಶ್ವರಿ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿಯ ಸಿದ್ದಯ್ಯ ಪ್ಲೋರೋಸಿಸ್ ತಜ್ಞರು ಉಪಸ್ಥಿತರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250587
Today
Yesterday
This Week
Last Week
This Month
Last Month
All days
9994
16742
76315
4062809
281682
395132
4250587
Your IP: 54.234.190.237
2018-01-18 16:03