Breaking News

ಉಚಿತ ಕೌಶಲ್ಯ ತರಬೇತಿ ಮತ್ತು ಉದ್ಯೋಗವಕಾಶ

Written by 
Published: 05 January 2018
122 times Last modified on Saturday, 06 January 2018 08:14

ಕೆ.ಎನ್.ಪಿ.ವಾರ್ತೆ,ಮರಳಿ,ಜ.06;

ಉಚಿತ ಕೌಶಲ್ಯ ತರಬೇತಿ ಮತ್ತು ಉದ್ಯೋಗವಕಾಶ 

ಭಾರತ ಸರಕಾರದ ಪ್ರಾಯೋಜಿತ ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ (PMKVY ) ಅಡಿಯಲ್ಲಿ, ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ (PMKK) ಮತ್ತು ಐಸಿಎ, ಇಡಿಯು ಸ್ಕಿಲ್ಸ್ ಪ್ರೈವೇಟ್ ಲಿಮಿಟೆಡ್ ಇವರ ಸಂಯುಕ್ತಾಶ್ರಯದಲ್ಲಿ "ಉಚಿತ ಕೌಶಲ್ಯ ತರಬೇತಿ ಮತ್ತು ಉದ್ಯೋಗವಕಾಶ" ಕೇಂದ್ರವನ್ನು ನಡೆಸಲಾಗುತ್ತಿದೆ. 

ಈ ತರಬೇತಿಯಲ್ಲಿ, ನಿರುದ್ಯೋಗಿ ಯುವಕ, ಯುವತಿಯರಿಗೆ ಉಚಿತ ತರಬೇತಿ ನೀಡಿ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗವಕಾಶಗಳನ್ನು ಕಲ್ಪಿಸಿಕೊಡಲಾಗುವುದು. 3ತಿಂಗಳ ತರಬೇತಿ ಉಚಿತವಾಗಿರುತ್ತದೆ. ತರಬೇತಿ ನಂತರ, ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಜೊತೆಗೆ ಸಂಸ್ಥೆಯ ವತಿಯಿಂದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗವಕಾಶವನ್ನು ದೊರಕಿಸಿಕೊಡಲಾಗುವುದು.

ನಿರುದ್ಯೋಗಿಗಳಿಗೆ, ಉದ್ಯೋಗ ಅವಕಾಶ ಮತ್ತು ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ ಆಯೋಜಿಸಲಾದ, ಈ ತರಬೇತಿಯಲ್ಲಿ ವಿವಿಧ ಸಂದರ್ಶನಗಳನ್ನು ಎದುರಿಸುವ, ಕೌಶಲ್ಯ ವರ್ಧಿಸಿಕೊಳ್ಳುವ `ಟಿಪ್ಸ್’ ಮತ್ತು ಮಾರ್ಗದರ್ಶನ, ವಿವಿಧ ವೃತ್ತಿಪರ ವಿಷಯಗಳ ಕುರಿತು, ವ್ಯಕ್ತಿತ್ವ ವಿಕಸನ ಹಾಗೂ ಬೇಸಿಕ್ ಇಂಗ್ಲಿಷ್ ಮತ್ತು ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. 8ನೇ ತರಗತಿ ಮೇಲ್ಪಟ್ಟ ನಿರುದ್ಯೋಗಿ ಯುವಕ, ಯುವತಿಯರು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಪ್ರಧಾನಮಂತ್ರಿ ಕೌಶಲ್ಯ ತರಬೇತಿ ಕೇಂದ್ರದ ಮರಳಿ ಘಟಕ ಪ್ರಕಟಣೆಯಲ್ಲಿ ಕೋರಿದೆ.

ಹೆಚ್ಚಿನ ಮಾಹಿತಿಗಾಗಿ,

9036136635, 8867621513 

ಸಂಪರ್ಕಿಸಬೇಕಾದ ವಿಳಾಸ :

ಎಂ.ಎಸ್.ಎಂ.ಎಸ್.ಸಮೂಹ ಶಿಕ್ಷಣ ಸಂಸ್ಥೆಯ ಆವರಣ, ರುದ್ರೇಶ್ವರ ನಗರ, ಮರಳಿ, ತಾ. ಗಂಗಾವತಿ

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4274378
Today
Yesterday
This Week
Last Week
This Month
Last Month
All days
813
15484
100106
4062809
305473
395132
4274378
Your IP: 54.167.126.106
2018-01-20 01:17