Breaking News

ವೈದ್ಯರ ವಿರುದ್ಧ ಗರಂ ಆದ ಆರೋಗ್ಯ ಸಚಿವ :ರಮೇಶ ಕುಮಾರ್

Written by 
Published: 28 November 2017
76 times Last modified on Tuesday, 28 November 2017 16:23

ಕೆ.ಎನ್.ಪಿ.ವಾರ್ತೆ,ಕಲಬುರಗಿ,ನ.28;

ವೈದ್ಯರ ವಿರುದ್ಧ ಗರಂ ಆದ ಆರೋಗ್ಯ ಸಚಿವ :ರಮೇಶ ಕುಮಾರ್

ಕಲಬುರಗಿ ಜಿಲ್ಲೆಗಿಂದು ಆಗಮಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶಕುಮಾರ್ ಅವರು ವೈದ್ಯರ ವಿರುದ್ದ ಗರಂ ಆಗಿದ್ರು. ಕೆಪಿಎಮ್ ಇ ಕಾಯ್ದೆ ತಿದ್ದುಪಡಿ ಬಗ್ಗೆ ಖಾಸಗಿ ಆಸ್ಪತ್ರೆಗಳ ವೈದ್ಯರ ತಪ್ಪು ತಿಳುವಳಿಕೆಯ ಹಿನ್ನಲೆ ಮುಷ್ಕರ ಸೇರಿದಂತೆ ಸಾಕಷ್ಟು ಅನಾಹುತಗಳು ಆದ್ವು ಎಂದು ವೈದ್ಯರ ವಿರುದ್ದ ಆಕ್ರೋಶವ್ಯಕ್ತಪಡಿಸಿದ ಅವ್ರು ಸರಕಾರದ ಯೋಜನೆಗಳ ಲಾಭ ಪಡೆಯುತ್ತಿರುವ ಪ್ರತಿಯೊಬ್ಬರು ಸರಕಾರಿ ಆಸ್ಪತ್ರೆಗೆ ಹೋಗ್ಬೇಕು. ಅದು ಮುಖ್ಯಮಂತ್ರಿಗೂ ಅನ್ವಯವಾಗುತ್ತದೆ ಎಂದು ಹೇಳಿದ್ರು.

ಹೌದು, ಕಲಬುರಗಿ ಜಿಲ್ಲೆಗಿಂದು ಆಗಮಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶಕುಮಾರ್ ಅವರು ವೈದ್ಯರ ವಿರುದ್ದ ಗರಂ ಆಗಿದ್ರು. ಕಲಬುರಗಿಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿ ಅವರು ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ವೈದ್ಯರು ಕೆಪಿಎಮ್ ಇ ಕಾಯಿದೆ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇರೋದ್ರಿಂದ ಇಷ್ಟೇಲ್ಲಾ ಆವಾಂತರಗಳಾದ್ವು. ಕಾಯಿದೆಯಲ್ಲಿನ ವಿಷಯಗಳನ್ನು ತಿಳಿದುಕೊಳ್ಳದೇ ಮುಷ್ಕರಕ್ಕೆ ಇಳಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ರು. ಮೆಡಿಕಲ್ ಕಾಲೇಜುಗಳು ಇರೋದು ಸರಕಾರದ್ದು ಆದ್ರೆ ಸರಕಾರ ಆಸ್ಪತ್ರೆಗಳಲ್ಲಿಯೇ ವೈದ್ಯರ ಹುದ್ದೆಗಳು ಖಾಲಿ ಬಿದ್ದಿವೆ. ಅದು ನಮ್ಮ ದುರ್ದೈವ. ಸೀಟು ಬೇಕು ಅಂದ್ರೆ ಮಾತ್ರ ಸರಕಾರಿ ಮೆಡಿಕಲ್ ಕಾಲೇಜುಗಳಿಗೆ ಬರ್ತಾರೆ. ಕೆಲಸಕ್ಕೆ ಮಾತ್ರ ಒಲ್ಲೇ ಅಂತಾರೆ. ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ಬನ್ನಿ ಎಂದ್ರೆ ಕೋರ್ಟ್ ಗೆ ಹೋಗಿದ್ದಾರೆ. ನಾವೇನು ಮಾಡೋದು ಎಂದರು. ಆಹಾರ ಉತ್ಪಾದನೆ ಇಲ್ಲಿಯೇ ಹೆಚ್ಚು ಆದ್ರೂ ದರಿದ್ರೂ ಹೆಚ್ಚಾಗಿ ಇರೋದು ಇಲ್ಲಿನೇ. ಈ ದೇಶದ ಪರಿಸ್ಥಿತಿ  ಇಷ್ಟೇ ಏನ್ ಮಾಡೋದು ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಕಲಬುರಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸರಕಾರಿ ಯೋಜನೆಗಳ ಲಾಭ ಪಡೆಯುವ ಪ್ರತಿಯೊಬ್ಬರು ಕೂಡ ಸರಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯಲೇಬೇಕು. ಇದು ರಾಜ್ಯದ ಮುಖ್ಯಮಂತ್ರಿಗೂ ಅನ್ವಯಿಸುತ್ತದೆ ಎಂದು ಆರೋಗ್ಯ ಸಚಿವ ರಮೇಶಕುಮಾರ್ ಹೇಳಿದರು.  ಸಾಮಾನ್ಯ ಜನರಿಂದ ಹಿಡಿದು ರಾಜ್ಯದ ಸಿಎಂ ಸೇರಿದಂತೆ ಪ್ರತಿಯೊಬ್ಬರಿಗೂ ಇದು ಅನ್ವಯವಾಗಲಿದ್ದು ಒಂದು ವೇಳೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗೋದಿಲ್ಲ ಎಂದು ವೈದ್ಯರು ಸಲಹೆ ನೀಡಿದ್ರೆ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಹೋಗಬಹುದು. ಇದ್ರಿಂದ ಸರಕಾರಿ ಆಸ್ಪತ್ರೆಗಳ ಉನ್ನತಿಕರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ರು.

ಇನ್ನು ಕಲಬುರಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ರಮೇಶಕುಮಾರ್ ಅಧಿಕಾರಿಗಳಿಂದ ಮಾಹಿತಿ ಪಡೆದ್ರು. ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಲ್ಲದೇ ಕೆಪಿಎಮ್ ಇ ಆ್ಯಕ್ಟ್ ಕುರಿತು ವೈದ್ಯರಿಗೆ ಕ್ಲಾಸ್ ತೆಗೆದುಕೊಂಡರು. ಇನ್ನು ಅತ್ತ ಸಚಿವರು ಸಭೆ ನಡೆಸಿದ್ರೆ ಕೆಲವು ವೈದ್ಯರು ನಿದ್ದೆಗೆ ಜಾರಿದ್ರು.

R.K. Toona

"ಸತ್ಯದ ಹುಡುಕಾಟದಲಿ"

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770786
Today
Yesterday
This Week
Last Week
This Month
Last Month
All days
5958
14978
20936
3647859
197013
189062
3770786
Your IP: 54.221.76.68
2017-12-18 08:49