Breaking News

ವಕೀಲವೃತ್ತಿ ಪವಿತ್ರವಾದದ್ದು ಸದ್ಭಳಕೆ ಮಾಡಿಕೊಳ್ಳಲು ಕರೆ

Written by 
Published: 05 December 2017
15 times Last modified on Tuesday, 05 December 2017 07:20

 

ಕೆ.ಎನ್.ಪಿ.ವಾರ್ತೆ,ಹೊಸಪೇಟೆ,ಡಿ.05;

ವರದಿ : ರಾಮಕೃಷ್ಣ

ವಕೀಲವೃತ್ತಿ ಪವಿತ್ರವಾದದ್ದು ಸದ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಆನಂದ್ ಸಿಂಗ್ ಕರೆ ನೀಡಿದ್ದಾರೆ.

ವಕೀಲರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಕೀಲವೃತ್ತಿ ಇದೊಂದು ಸಮಾಜ ಸೇವೆಯ ಕಾರ್ಯ ಮತ್ತು ಜನಪರ ಕೆಲಸವಾಗಿದ್ದು, ಜನರ ನೋವು, ನಲಿವಿಗೆ ಸ್ಪಂದಿಸುವ ಕೆಲಸವಾಗಿದೆ. ಈ ವೃತ್ತಿಯಿಂದ ಸಮಾಜದಲ್ಲಿನ ನೂರಾರು ಸಮಸ್ಯೆಗಳನ್ನು ಇತ್ಯರ್ಥಗೊಳಿಸಬಹುದಾಗಿದೆ ಇದರ ಸದ್ಭಳಕೆ ಮಾಡಿಕೊಳ್ಳಬೇಕೆಂದು ವಿಜಯನಗರ ಕ್ಷೇತ್ರದ ಶಾಸಕರಾದ ಆನಂದ್ ಸಿಂಗ್ ಹೇಳಿದರು.

ಇದು ಸಮಾಜ ಸುಧಾರಣೆ ಮಾರ್ಗವಾಗಿದ್ದು, ಈ ವೃತ್ತಿ ಪವಿತ್ರವಾಗಿದೆ. ಈ ವೃತ್ತಿಗೆ ಬಳ್ಳಾರಿಯ ಎನ್. ತಿಪ್ಪಣ್ಣ ಅವರದ್ದು ಸೇರಿದಂತೆ ಜಿಲ್ಲೆಯ ಹಿರಿಯ ವಕೀಲರ ಅಪಾರ ಕೊಡುಗೆ ಇದೆ ಎಂದರು. ದೇಶ,ರಾಜ್ಯ ಮತ್ತು ಊರುಗಳ ಯಾವುದೇ ಸಮಸ್ಯೆ ಇದ್ದರೂ ನಿಸ್ವಾರ್ಥ ಸೇವೆಯ ಮೂಲಕ ನ್ಯಾಯ ಒದಗಿಸುವ ಕೆಲಸವನ್ನು ಪ್ರತಿಯೊಬ್ಬ ವಕೀಲರು ಮಾಡುತ್ತಾರೆ.‌

ವಕೀಲರಿಂದ ನ್ಯಾಯ ಒದಗಿಸುವುದರ ಜೊತೆಗೆ ಸಮಾಜದ ಸುಧಾರಣೆ ಸಾಧ್ಯ. ಹೀಗಾಗಿ ಅವರ ಸೇವೆ ಚಿರಸ್ಮರಣೀಯ ಎಂದರು. ಈ ವೇಳೆ ಹಿರಿಯ ವಕೀಲರಾದ ಎನ್. ತಿಪ್ಪಣ್ಣ ಮಾತನಾಡಿ, ವಕೀಲರು ಎದುರಿಸಬಹುದಾದ ಸಮಸ್ಯೆ ಮತ್ತು ಅದರ ಪರಿಹಾರದ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ತಿನ ಉಸ್ತುವಾರಿ ಸದಸ್ಯ ಎಂ.ಅನಿಲ್ ಕುಮಾರ, ವಿ.ವಿ.ಸಂಘದ ಅಧ್ಯಕ್ಷರಾದ ಉಡೇದ ಬಸವರಾಜ್, ಸಂಘದ ಅಧ್ಯಕ್ಷರಾದ ಹೆಚ್.ಉಮೇಶ್, ವಕೀಲರಾದ ಡಿ.ವೀರನಗೌಡ, ಹೆಚ್.ವೆಂಕಟರಾವ್, ಎಸ್.ವಿ.ಜವಳಿ, ಎ.ಎಂ.ಸುರೇಶ್ ಕುಮಾರ್, ಕೆ.ಪ್ರಭಾಕರ ರಾವ್, ಗುಜ್ಜಲ್ ನಾಗರಾಜ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770844
Today
Yesterday
This Week
Last Week
This Month
Last Month
All days
6016
14978
20994
3647859
197071
189062
3770844
Your IP: 54.221.76.68
2017-12-18 08:54