Breaking News

ವಾಲ್ಮೀಕಿ ಜಯಂತಿಗೆ ನೀರಸ ಪ್ರತಿಕ್ರೀಯೆ

Written by 
Published: 05 October 2017
50 times Last modified on Thursday, 05 October 2017 17:38

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.05;

ವರದಿ : ಟಿ.ಗಣೇಶ್

ನಗರದಲ್ಲಿ ವಿವಿಧ ರಾಜಕೀಯ ಮುಖಂಡರು ವಾಲ್ಮೀಕಿ ಮೂರ್ತಿಗೆ ಪೂಜೆಸಲ್ಲಿಸಿ, ಮಾಲಾರ್ಪಣೆ ಮಾಡಿದರು.

ಇಂದು ವಾಲ್ಮೀಕಿ ಜಯಂತಿಯ ಅಂಗವಾಗಿ ನಗರದ ಎಸ್.ಪಿ.ವೃತ್ತದಲ್ಲಿರುವ ಮಹರ್ಷಿ ವಾಲ್ಮೀಕಿ ಮೂರ್ತಿಗೆ ಜಿ.ಪಂ.ನ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಪಾಲಿಕೆಯ ಮಹಾಪೌರ ಜಿ.ವೆಂಕಟರಮಣ, ಜಿ.ಪಂ.ಉಪಾಧ್ಯಕ್ಷೆ ದೀನಾ ಮಂಜುನಾಥ್, ಪೋಲಿಸ್ ವರಿಷ್ಠಾಧಿಕಾರಿ ಆರ್.ಚೇತನ್, ಜಿ.ಪಂ.ಸಿಇಓ.ಡಾ||ರಾಜೇಂದ್ರ, ಪಾಲಿಕೆಯ ಆಯುಕ್ತ ಎಂ.ಕೆ.ನಲ್ವಡಿ ಇತರ ಕೆಲವೇ ಮುಖಂಡರು ಬಂದು ಪೂಜೆಸಲ್ಲಿಸಿ ಮಾಲಾರ್ಪಣೆ ಮಾಡಿದರು. 

ಸಚಿವರ ಗೈರು:-

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‍ಲಾಡ್ ಆಗಮಿಸಿ, ಮಹರ್ಷಿವಾಲ್ಮೀಕಿ ಮೂರ್ತಿಗೆ ಮಾಲಾರ್ಪಣೆ ಮಾಡುತ್ತಾರೆಂದು ಬಹುನಿರೀಕ್ಷೆಯಿಂದ ಕಾದುಕುಳಿತ ವಾಲ್ಮೀಕಿ ಜನಾಂಗದವರು ವಾಪಸ್ ಆದರು. ಸಚಿವರು ವಾಲ್ಮೀಕಿ ಮೂರ್ತಿಗೆ ಮಾಲಾರ್ಪಣೆ ಮಾಡಲು ಬರಲೇ ಇಲ್ಲ. ವೇದಿಕೆಯ ಕಾರ್ಯಕ್ರಮಕ್ಕೂ ಬರದೆ ಸಚಿವರ ಗೈರುಹಾಜರಿಯಲ್ಲಿಯೇ ಕಾರ್ಯಕ್ರಮಗಳು ನಡೆದವು. ವೇದಿಕೆಯು ಕೆಲವೇ ಜನರಿಂದ ಖಾಲಿಯಾಗಿಯೇ ಕಾಣುತ್ತಿತ್ತು.

ಮತ್ತೊಂದೆಡೆ

ದಲಿತರಿಂದ ಧರಣಿ :-

ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ವಾಲ್ಮೀಕಿ ಜಯಂತಿಯಂದು ಧಲಿತರಿಂದ ಧರಣಿ ನಡೆಯಿತು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತರು ಧರಣಿ ನಡೆಸಿದರು.

ಪ್ರಮುಖ ಬೇಡಿಕೆಗಳು:- ಪರಿಶಿಷ್ಟ ಪಂಗಡದ (ಎಸ್.ಟಿ.)ಮೀಸಲಾತಿ ಶೇಖಡ 7.5ಕ್ಕೆ ಹೆಚ್ಚಿಸಬೇಕು. ಎಸ್.ಸಿ.ಎಸ್.ಟಿ.ಮೀಸಲಾತಿ ಮುಂದುವರೆಸಲು ಸೂಕ್ತ ಕಾನೂನು ರೂಪಿಸಿ ಸುಗ್ರೀವಾಜ್ಞೆ ಹೊರಡಿಸಬೇಕು. ಖಾಸಗಿ ಕ್ಷೇತ್ರದಲ್ಲಿ ಬ್ಯಾಂಕ್,ಇನ್ಸೂರೆನ್ಸ್, ಶಿಕ್ಷಣ,ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲೂ ಎಸ್.ಸಿ.ಎಸ್.ಟಿ. ಓಬಿಸಿ ಸಮುದಾಯಗಳಿಗೆ ಮೀಸಲಾತಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತರು ಇಂದು ಧರಣಿ ನಡೆಸಿದರು.

 



 


 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750297
Today
Yesterday
This Week
Last Week
This Month
Last Month
All days
447
13442
102438
3588738
176524
189062
3750297
Your IP: 23.22.136.56
2017-12-17 00:39