Breaking News

ವಾಸಿಸುವವನೇ ನೆಲೆದೊಡೆಯ ವಿಧೇಯಕ ಮಂಡನೆ

Written by 
Published: 20 November 2017
74 times Last modified on Monday, 20 November 2017 12:18

ಕೆ.ಎನ್.ಪಿ.ವಾರ್ತೆ,ಬೆಳಗಾವಿ,ನ.20;

‘ವಾಸಿಸುವವನೇ ನೆಲದೊಡೆಯ’ ವಿಧೇಯಕವನ್ನು ಇಂದು ಮಂಡಿಸಲಾಯಿತು.

ಉಳುವವನೇ ಭೂಒಡೆಯ' ಎಂಬ 70ರ ದಶಕದ ಐತಿಹಾಸಿಕ ಭೂಸುಧಾರಣಾ ಕಾಯಿದೆ ಬಳಿಕ ಅಂಥದ್ದೇ ಮಹತ್ವದ 'ವಾಸಿಸುವವನೇ ನೆಲದೊಡೆಯ' ಎಂಬ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ವಿಧೇಯಕವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ (3ನೆ ತಿದ್ದುಪಡಿ) 94(ಡಿ) ವಿಧೇಯಕವನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾನಸಭೆಯಲ್ಲಿಂದು ಮಂಡಿಸಿದರು.

ತಮ್ಮದಲ್ಲದ ಸ್ಥಳಗಳಲ್ಲಿ ಸರ್ಕಾರಿ ಭೂಮಿಗಳಲ್ಲಿ ವಾಸದ ಮನೆ ಅಥವಾ ಅದಕ್ಕೆ ಹೊಂದಿಕೊಂಡಂತಿರುವ ನಿವೇಶನಗಳನ್ನು ಸಕ್ರಮಗೊಳಿಸುವ ವಾಸಿಸುವವನೇ ನೆಲದೊಡೆಯ ವಿಧೇಯಕವನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ 94(ಡಿ) ಅಧಿನಿಯಮವನ್ನು ಜಾರಿಗೊಳಿಸುವ ವಿಧೇಯಕವನ್ನು ಸದನದಲ್ಲಿಂದು ಮಂಡಿಸಲಾಯಿತು. ತಾಂಡಾ,ಗೊಲ್ಲರಹಟ್ಟಿ, ಮುಜರೆ ಮುಂತಾದ ಕಂದಾಯ ಗ್ರಾಮ ವ್ಯಾಪ್ತಿಗೆ ತಂದು ಅಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡವರಿಗೆ ಸಕ್ರಮಗೊಳಿಸುವ 1964 ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು 94(ಡಿ) ಸೇರಿಸುವ ತಿದ್ದುಪಡಿ ವಿಧೇಯಕ ಇದಾಗಿದೆ ಎಂದು ಕಾಗೋಡು ಹೇಳಿದರು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770724
Today
Yesterday
This Week
Last Week
This Month
Last Month
All days
5896
14978
20874
3647859
196951
189062
3770724
Your IP: 54.221.76.68
2017-12-18 08:44