Breaking News

ವಿದ್ಯಾಸಿರಿ-2017

Written by 

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.10;

ವರದಿ : ಟಿ.ಗಣೇಶ್

ವಾರ್ನರ್ ಮೀಡಿಯಾ ವಿಷನ್ಸ್ ಅರ್ಪಿಸುವ ವಿದ್ಯಾಸಿರಿ-2017 ಸಮಾರಂಭವನ್ನು ಅನ್ಮೋಲ್ ಗ್ರೂಪ್ ಸಂಸ್ಥೆಯ ವ್ಯವಸ್ಥಾಪಕರಾದ ಎಂ.ಎಂ.ವಲಿಸಾಹೇಬ್(ಹಕೀಂಸಾಬ್) ಉದ್ಘಾಟಿಸಿದರು.

ಇಂದು ನಗರದ ಬಿಡಿಎಎ ಮೈದಾನದಲ್ಲಿ ಆಯೋಜಿಸಿದ ವಿದ್ಯಾಸಿರಿ-2017 ಸಮಾರಂಭದಲ್ಲಿ ವಿವಿಧ ಸರ್ಕಾರಿ ಶಾಲೆಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿರುವ ವಿದ್ಯಾರ್ಥಿಗಳಿಗೆ ಸ್ಪರ್ಧೇಯಲ್ಲಿ ಭಾಗವಹಿಸಲು ಅನುಮತಿ ಪತ್ರವನ್ನು ನೀಡಿದರು. ಈ ಸಮಾರಂಭದಲ್ಲಿ ಅನ್ಮೋಲ್ ಗ್ರೂಪ್ ಸಂಸ್ಥೆಯ ವ್ಯವಸ್ಥಾಪಕರಾದ ಎಂ.ಎಂ.ವಲಿಸಾಹೇಬ್(ಹಕೀಂಸಾಬ್) ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷರು ಮೈನ್ಸ್ ಮತ್ತು ಸಿಸಿ ಎಂ.ಎಸ್.ಪಿ.ಎಲ್.ಲಿಮಿಟೆಡ್‍ನ ಕೆ.ಮಧುಸೂಧನ್ ಪ್ರಶಸ್ತಿಪತ್ರವನ್ನು ವಿತರಿಸಿದರು. 

ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀಧರನ್, ಹೊಸಪೇಟೆಯ ಗಣಿ ಮಾಲೀಕರಾದ ಕವಿರಾಜ್ ಅರಸ್, ಖ್ಯಾತ ಸಿನಿ ಕಲಾವಿದ ಬೆಂಗಳೂರಿನ ರಜತ್‍ಬಾಲರಾಜ್, ಹಿರಿಯ ಸಾಹಿತಿ ಲಿಂಗಾರೆಡ್ಡಿ ಅಲೂರು, ಕೆ.ಎರ್ರಿಸ್ವಾಮಿ ರಾಜ್ಯಾಧ್ಯಕ್ಷರು ಕ,ಜಸೇನ, ಎಮ್,ವಿ.ಪ್ರಕಾಶ್. ನಿರ್ದೇಶಕರು ವಾರ್ನರ್ ಮೀಡಿಯಾ ವಿಷನ್, ಬೆಂಗಳೂರು, ಆರ್.ಎ.ಮೋಹನ್ ವ್ಯವಸ್ಥಾಪಕ ನಿರ್ದೇಶಕರು, ವಾರ್ನರ್ ಮೀಡಿಯಾ ವಿಷನ್.ಬೆಂಗಳೂರು, ಮತ್ತು ಸ್ಪರ್ದೇಯಲ್ಲಿ ಭಾಗವಹಿಸಲು ವಿವಿಧ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಹಾಜರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3278798
Today
Yesterday
This Week
Last Week
This Month
Last Month
All days
993
6326
27641
3222209
103288
263209
3278798
Your IP: 54.80.236.48
2017-10-19 03:20