Breaking News

ವಿಕಲಚೇತನರು ಸಮಾಜದಲ್ಲಿ ಎಲ್ಲರಂತೆ ಬದುಕಲಿ : ಡಾ.ತೇಲಿ

Written by 
Published: 07 January 2018
49 times Last modified on Sunday, 07 January 2018 13:04

ಕೆ.ಎನ್.ಪಿ.ವಾರ್ತೆ,ಬೀಳಗಿ,ಜ.07;

ವರದಿ : ಬಸವರಾಜ್ ಬಾಬು ಕೋರಿ

ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ವಿಕಲಚೇತನರು ಸಮಾಜದಲ್ಲಿ ಎಲ್ಲರಂತೆ ಬದುಕಬೇಕೆಂದು ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಡಾ.ಶಿವಪ್ಪ ತೇಲಿ ಹೇಳಿದರು.

ಬೀಳಗಿಯ ಗಾಂಧಿನಗರದ ಅನ್ನಪೂರ್ಣೇಶ್ವರಿ ಬ್ರಹನ್ಮಠದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಪಂ.ಪುಟ್ಟರಾಜ ಗವಾಯಿ ವಿಕಲಚೇತನರ ಸ್ವಸಹಾಯ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಅವರು ಹೀಗೆ ಹೇಳಿದರು. ಈ ವೇಳೆ ಸಾನಿಧ್ಯ ವಹಿಸಿದ್ದ ಅನ್ನಪೂಣೇಶ್ವರಿ ಬ್ರಹನ್ಮಠದ ಶಿವಾನಂದ ದೇವರು ಮಾತನಾಡಿ, ವಿಕಲಚೇತನರು ಸಂಘಟನೆಯಿಂದ ಸ್ವಾವಲಂಭಿಗಳಾಗಿ ವಿಶೇಷಸಾಧನೆಗಳನ್ನು ಮಾಡಿದ್ದಾರೆ. ಅವರಿಗೆ ಅನುಕಂಪ ತೋರದೆ ಅವಕಾಶಗಳನ್ನು ನೀಡಿದರೆ ಮತ್ತಷ್ಟು ಸಾಧಿಸುತ್ತಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಶೇಖರ ಕಾಖಂಡಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸಿದ್ದು ಗಡಾದ, ಲೋಕಣ್ಣ ಪರನ್ನವರ, ಉಮೇಶ ಚನ್ನಿ, ಮಲ್ಲಪ್ಪ ವಾಲೀಕಾರ, ಮಾಶಪ್ಪ ಕೊಂಡಕರ, ಮಲ್ಲಪ್ಪ ಗಾಣಿಗೇರ, ಹಾಶಿಂಬಿ ಪಕಾಲಿ, ಸಿದ್ದಮ್ಮ ಜೈನಾಪೂರ, ಲಕ್ಷ್ಮಣ ಶಿವಪೂಜಿ ಉಪಸ್ಥಿತರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250401
Today
Yesterday
This Week
Last Week
This Month
Last Month
All days
9808
16742
76129
4062809
281496
395132
4250401
Your IP: 54.234.190.237
2018-01-18 15:53