Breaking News

ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Written by 
Published: 26 September 2017
55 times Last modified on Tuesday, 26 September 2017 16:47

ವರದಿ : ಟಿ.ಗಣೇಶ್

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಸೆ.26;

ಉತ್ತರಪ್ರದೇಶದ ಬನಾರಸ್ ಹಿಂದು ವಿಶ್ವವಿದ್ಯಾಲಯದ (ಬಿಎಚ್‍ಯು) ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಲೈಂಗಿಕ ಕಿರಿಕುಳವನ್ನು ಖಂಡಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಪೋಲಿಸರು ಲಾಠಿ ಪ್ರಹಾರ ನಡೆಸಿದ ಪೈಶಾಚಿಕಕೃತ್ಯವನ್ನು ಹಾಗೂ ಲೈಂಗಿಕ ಕಿರಿಕುಳದ ಬಗ್ಗೆ ವಿಶ್ವವಿದ್ಯಾಲಯದ ನಾಚಿಗೆಗೇಡು ಪ್ರತಿಕ್ರಿಯೆಯನ್ನು ಎ.ಐ.ಡಿ.ಎಸ್.ಓ, ಏಐಡಿವೈಓ ಹಾಗೂ ಏಐಎಮ್‍ಎಸ್‍ಎಸ್‍ ಉಗ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿದರು.

ಇಂದು ನಗರದ ಗಡಗಿಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉತ್ತರ ಪ್ರದೇಶ ಸರ್ಕಾರದ ಪ್ರತಿಕೃತಿದಹನ ಮಾಡಲಾಯಿತು. ಗುರುವಾರದಂದು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಂಜೆ 6 ಗಂಟೆಗೆ ಮೂವರು ಬೈಕು ಸವಾರರು ವಿಶ್ವವಿದ್ಯಾಲಯದ ಆವರಣದ ಒಳಗಡೆಯೇ ಲೈಂಗಿಕ ದೌರ್ಜನ್ಯ ವೆಸಗಿದ್ದಾರೆ. ಆಘಾತಕ್ಕೊಳಗಾದ ವಿದ್ಯಾರ್ಥಿನಿಯು ವಿಶ್ವವಿದ್ಯಾಲಯದ ಶಿಸ್ತುಪಾಲಕ ಅಧಿಕಾರಿಗಳ ಬಳಿ ದೂರುದಾಖಲಿಸಲು ಹೋದಾಗ, ಆ ಅಧಿಕಾರಿಯು ಹುಡುಗಿಯರು ಸಂಜೆ ಒಬ್ಬಂಟಿಯಾಗಿ ಓಡಾಡುವುದೇ ಇದಕ್ಕೆ ಕಾರಣವೆಂದು ವಿದ್ಯಾರ್ಥಿನಿಯನ್ನೇ ನಿಂದಿಸಿದ್ದಾರೆ!

ವಿಶ್ವವಿದ್ಯಾಲಯದ ಈ ಸಂವೇದನಾರಹಿತ ಧೋರಣೆಯಿಂದ ಬೇಸತ್ತು ವಿದ್ಯಾರ್ಥಿನಿಯರು ನ್ಯಾಯಕ್ಕಾಗಿ ಹಾಗೂ ಸುರಕ್ಷತೆಗಾಗಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಇದೇ ಪ್ರತಿಭಟನೆಯ ವೇಳೆ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಪೋಲಿಸರು ಲಾಠಿ ಪ್ರಹಾರ ನಡೆಸಿದ್ದಾರೆ. ಅಲ್ಲಿ ವಿದ್ಯಾರ್ಥಿನಿಯರ ಮೇಲೆ ಲಾಠಿ ಬೀಸಿದ್ದ ಪೋಲಿಸರೆಲ್ಲರೂ ಪುರುಷರೇ ಆಗಿದ್ದು ಮಹಿಳಾ ಪೋಲೀಸರನ್ನು ಇಲ್ಲಿ ಬಳಸಿ ಕೊಳ್ಳದೇ ಪೋಲೀಸ್ ದರ್ಪ ತೋರಿದ್ದಾರೆ.

ಈ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಎಐಎಮ್‍ಎಸ್‍ಎಸ್ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಎಮ್.ಎನ್.ಮಂಜುಳ ಮಾತನಾಡುತ್ತ.., “ಈ ಘಟನೆಯನ್ನು ಸುತ್ತುವರೆದಂತೆ ವಿಶ್ವವಿದ್ಯಾಲಯದ ಆಡಳಿತದ ಪಾತ್ರವನ್ನು ಹಾಗೂ ಈ ಬಗ್ಗೆ ಮೌನ ವಹಿಸಿರುವ ರಾಜ್ಯ ಹಾಗೂ ಕೇಂದ್ರ ಸರಕಾರದ ಧೋರಣೆಯನ್ನು ಎ.ಐ.ಡಿ.ಎಸ್.ಓ, ಏಐಡಿವೈಓ ಹಾಗೂ ಏಐಎಮ್‍ಎಸ್‍ಎಸ್ ಅತ್ಯುಗ್ರವಾಗಿ ಖಂಡಿಸುತ್ತದೆ.  ಹಾಗೂ ಈ ಘಟನೆಯನ್ನು ಖಂಡಿಸಿ, ದೌರ್ಜನ್ಯ ವೆಸಗಿದವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಹಾಗೂ ವಿದ್ಯಾರ್ಥಿನಿಯರ ಮೇಲೆ ಪುರುಷ ಪೋಲಿಸರು ನಡೆಸಿರುವ ಲಾಠಿ ಪ್ರಹಾರದ ಬಗ್ಗೆ ನಿಶ್ಪಕ್ಷಪಾತ ತನಿಖೆ ನಡೆಸಬೇಕಾಗಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಸಂಪೂರ್ಣ ಸುರಕ್ಷತೆ ಒದಗಿಸುವಂತೆ ಎ.ಐ.ಡಿ.ಎಸ್.ಓ, ಏಐಡಿವೈಓ ಹಾಗೂ ಏಐಎಮ್‍ಎಸ್‍ಎಸ್ ಸಂಘಟನೆಗಳಿಂದ ಆಗ್ರಹಿಸುತ್ತಿದ್ದೇವೆ” ಎಂದು ಹೇಳಿದರು.

ಈ ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಎಐಡಿಎಸ್‍ಓ ಸಂಘಟನೆಯ ಜಿಲ್ಲಾಧ್ಯಕ್ಷರಾದ ಗೋವಿಂದ್‍ರವರು ವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಎಐಡಿವೈಓ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ.ರಾಧಾಕೃಷ್ಣ, ಎಐಎಮ್‍ಎಸ್‍ಎಸ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಜೆ.ಶಾಂತಾ ಹಾಗೂ ಜಿ.ಸುರೇಶ್, ಈಶ್ವರಿ, ಭಾರ್ಗವಿ, ರೇಖಾ, ಸೇತುಮಾದವ್,ಜಗದೀಶ್.ವಿ.ಎನ್, ರಾಜ, ಶೇಖರ್, ಈರಣ್ಣ, ಮನೋಜ್, ಹೇಮಂತ್‍ರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770916
Today
Yesterday
This Week
Last Week
This Month
Last Month
All days
6088
14978
21066
3647859
197143
189062
3770916
Your IP: 54.221.76.68
2017-12-18 09:00