Breaking News

ವಿಎಸ್‍ಕೆ ವಿವಿಯಲ್ಲಿ ಸಮಸ್ಯೆಗಳ ಸುರಿಮಳೆ ಗೈದ ವಿದ್ಯಾರ್ಥಿಗಳ ಸಮೂಹ

Written by 
Published: 28 September 2017
86 times Last modified on Thursday, 28 September 2017 17:17

ವರದಿ : ಟಿ.ಗಣೇಶ್

ಕೆ.ಎನ್.ಪಿ.ವಾರ್ತೆ,ಬಳ್ಳಾರಿ, ಸೆ. 28;

ವಿಧ್ಯಾಭ್ಯಾಸಕ್ಕಾಗಿ ಆಗಮಿಸಿದ ವಿದ್ಯಾರ್ಥಿಗಳಿಗೆ ವಿಎಸ್‍ಕೆ ವಿವಿಯಲ್ಲಿ ಮೂಲಭೂತ ಸೌಕರ್ಯ ಸೇರಿ ವಿವಿಧ ಬಗೆಯ ಸಮಸ್ಯೆಗಳು ಇವೆ ಎಂದು ವಿದ್ಯಾರ್ಥಿಗಳು ಪ್ರೊ.ಸುಭಾಷ್ ಎದುರು ನೇರವಾಗಿ ಆರೋಪಿಸಿದ್ದಾರೆ.

ಇಂದು ವಿ.ಎಸ್.ಕೆ.ವಿವಿಯ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಊರುಗಳಿಂದ ಮತ್ತು ಸ್ಥಳೀಯ ವಿದ್ಯಾರ್ಥಿಗಳಿಂದ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿರುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಎಳೆ ಎಳೆಯಾಗಿ ವಿವರಿಸಿದರು. ಪಿ.ಜಿಗಳಲ್ಲಿ ಕುಡಿಯುವ ನೀರು, ಶೌಚಾಲಯ, ಬೀದಿದೀಪ, ರಸ್ತೆ ನಿರ್ಮಾಣ, ಊಟದ ವ್ಯವಸ್ಥೆಗೆ ಸಭಾವನ, ದೂರದ ಪಿಜಿಗಳಿಗೆ ತೆರಳಲು ಬಸ್ ಸೌಲಭ್ಯ, ವಿವಿಯ ಆವರಣದಲ್ಲಿ ಹಾವುಗಳ ಕಾಟ, ಗ್ರಂಥಾಲಯದಲ್ಲಿ ಪಠ್ಯಕ್ರಮಕ್ಕೆ ತಕ್ಕಂತೆ ಪುಸ್ತಕಗಳ ಕೊರತೆ, ವಿದ್ಯಾರ್ಥಿನಿಲಯಕ್ಕೆ ವಾರ್ಡನ್‍ಗಳನ್ನು ನೇಮಿಸುವ ಕುರಿತು, ಲ್ಯಾಬ್ ಗಳಲ್ಲಿ ರಾಸಾಯನಿಕ ವಸ್ತುಗಳು, ವಿವಿಯಲ್ಲಿ ರಸ್ತೆ, ಓಬಿಸಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಕೊರತೆ, ಪುಸ್ತಕಗಳ ಕೊರತೆ, ವಿದ್ಯಾರ್ಥಿವೇತನ ಶುಲ್ಕವಿನಾಯಿತಿ, ಬಸ್‍ತಂಗುದಾಣ ಹಾಗೂ ಜರ್ನಲ್‍ಗಳ ಕೊರತೆ ಸೇರಿದಂತೆ ವಿವಿಧ ವಿಷಯಗಳು ಮತ್ತು ಪಿವನ್‍ಗಳ ಕೊರತೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ವಿವಿಯ ಯಾವುದೇ ಸಿಬ್ಬಂದಿಗಳು ಸ್ಪಂದಿಸುವುದಿಲ್ಲ ಎಂದು ವಿವಿಧ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪ್ರೊ. ವಿ.ಸಿ. ಸುಭಾಷ್ ಎದುರಿನಲ್ಲಿ ನೇರವಾದ ಆರೋಪಗಳನ್ನು ಮಾಡಿದರು.

ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗನೆ ಪರಿಹರಿಸುವುದಾಗಿ ಪ್ರೊ. ಸುಭಾಷ್ ಸಭೆಯಲ್ಲಿ ಭರವಸೆ ನೀಡಿದರಲ್ಲದೆ. ಎಲ್ಲ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಕುಲಪತಿಗಳು ಸಂಬಂಧಪಟ್ಟ ವಿಭಾಗಗಳ ಮುಖ್ಯಸ್ಥರು ಹಾಗೂ ಘಟಕಗಳ ಸಂಯೋಜಕರು ಹಾಗೂ ಆಧಿಕಾರಿಗಳ ಸಮಸ್ಯೆ ಪರಿಹರಿಸಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಆದಷ್ಟು ಬೇಗನೆ ಸಮಸ್ಯೆ ಪರಿಸುವುದಾಗಿ ಭರವಸೆ ನೀಡಿದರು.

ವಿದ್ಯಾರ್ಥಿ ಸದಸ್ಯರ ನೇಮಕ: ವಿವಿಯ ವಿದ್ಯಾವಿಷಯಕ ಪರಿಷತ್‍ಗೆ ವಿವಿಧ ಕಾಲೇಜುಗಳ ಆರು ಜನ ವಿದ್ಯಾರ್ಥಿಗಳನ್ನು ನೇಮಕ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಅವರ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿವಿಯ ಕುಲಸಚಿವರಾದ ಪ್ರೊ. ಎಸ್.ಎ.ಪಾಟೀಲ್, ವಿವಿಧ ನಿಖಾಯಗಳ ಡೀನರು ಹಾಗೂ ಸಂಯೋಜಕರು ಹಾಜರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770942
Today
Yesterday
This Week
Last Week
This Month
Last Month
All days
6114
14978
21092
3647859
197169
189062
3770942
Your IP: 54.221.76.68
2017-12-18 09:02