Breaking News

ವೈರಲ್ ಆದ ಕಲ್ಮಟ ಸ್ವಾಮಿಯ ಮಂಚದಾಟ

Written by 
Published: 07 December 2017
114 times Last modified on Thursday, 07 December 2017 08:31

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಡಿ.07;

ಲಾಡ್ಜ್ ನಲ್ಲಿ ಮಹಿಳೆ ಜತೆ ಇರುವ ಕಲ್ಮಠ ಕೊಟ್ಟುರೇಶ್ವರಸ್ವಾಮಿ, ವಿಡಿಯೋ ವೈರಲ್ ಆಗಿದೆ.

ಯಲಹಂಕದ ಹುಣಸಮಾರನಹಳ್ಳಿಯ ಮದ್ದೇವಣಾಪುರ ಜಂಗಮ ಮಠದ ಸ್ವಾಮೀಜಿ ಪುತ್ರ ದಯಾನಂದ ರಾಸಲೀಲೆ ಬಳಿಕ ಇದೀಗ ಕೊಪ್ಪಳ ಜಿಲ್ಲೆಯ ಸ್ವಾಮಿಯೊಬ್ಬರ ಕಾಮಪುರಾಣದ ವಿಡಿಯೋ ಬಯಲಾಗಿದೆ.  ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಲ್ಮಠ ಕೊಟ್ಟುರೇಶ್ವರಸ್ವಾಮಿ ಲಾಡ್ಜ್ ವೊಂದರ ಕೋಣೆಯಲ್ಲಿ ಮಹಿಳೆ ಜೊತೆ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು ಸ್ವಾಮಿಯ ಕಾರು ಚಾಲಕ ಮಲ್ಲಯ್ಯಸ್ವಾಮಿ ಎನ್ನುವವರು ಬಹಿರಂಗಪಡಿಸಿದ್ದಾರೆ.

ಆದರೆ, ಈ ಎಲ್ಲ ಆರೋಪಗಳನ್ನು ಸ್ವಾಮಿ ತಿರಸ್ಕರಿಸಿದ್ದಾರೆ. ಸ್ವಾಮಿ ಲಾಡ್ಜ್ ಪಲ್ಲಂಗದಾಟದ ವಿಡಿಯೋವನ್ನು ಬಹಿರಂಗಪಡಿಸಿದ ಡ್ರೈವರ್ ಗೆ ದೂರವಾಣಿ ಮೂಲಕ ಬೆದರಿಕೆ ಕರೆಗಳು ಇರುವುದರಿಂದ ಡ್ರೈವರ್ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆಯ ದೂರು ದಾಖಲಿಸಿದ್ದಾನೆ. 

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ನಾಲ್ಕು ವರ್ಷದ ಹಿಂದಿನದ್ದು. ಆದರೆ, ಇದು ಎರಡು ತಿಂಗಳ ಹಿಂದೆ ವೈರಲ್ ಆಗಿದೆ. ಹೀಗಾಗಿ ಈ ವಿಡಿಯೋ ಬಗ್ಗೆ ಹಲವು ಅನುಮಾನಗಳು ಕೂಡ ಹುಟ್ಟಿಕೊಂಡಿವೆ. ಒಟ್ಟಾರೆಯಾಗಿ ವೈರಲ್ ಆದ ಈ ವಿಡಿಯೋ ಕುರಿತು ಸತ್ಯಾ ಸತ್ಯತೆಗಳು ಹೊರಬರಬೇಕಿದೆ. ಆದರೆ, ಸ್ವಾಮೀಜಿ ಮಹಿಳೆಯೊಂದಿಗೆ ಲಾಡ್ಜ್ ನಲ್ಲಿರುವ ವಿಡಿಯೋ ವೈರಲ್ ಆಗಿರುವುದು ಭಕ್ತರಲ್ಲಿ ಅಸಮಾಧಾನ ಉಂಟುಮಾಡಿದೆ.

ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770700
Today
Yesterday
This Week
Last Week
This Month
Last Month
All days
5872
14978
20850
3647859
196927
189062
3770700
Your IP: 54.221.76.68
2017-12-18 08:42