Breaking News

ಎಲ್ಲ ಸರ್ಕಾರಗಳಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಕೋಮಾರ

Written by 
Published: 08 January 2018
45 times Last modified on Monday, 08 January 2018 07:35

ಕೆ.ಎನ್.ಪಿ.ವಾರ್ತೆ,ಬೀಳಗಿ,ಜ.08;

ವರದಿ : ಬಸವರಾಜ್ ಬಾಬು ಕೋರಿ

ಇಲ್ಲಿಯವರೆಗೆ ನಮ್ಮ ರಾಜ್ಯವನ್ನಾಳಿದ ಎಲ್ಲ ಸರ್ಕಾರಗಳಿಂದ ಉತ್ತರ ಕರ್ನಾಟಕದ ಎಲ್ಲ ಕ್ಷೇತ್ರಗಳಿಗೆ ಅನ್ಯಾಯವಾಗಿದೆ. ಕಾರಣ ನಾವು 13ಜಿಲ್ಲೆಗಳ ಅಭಿವೃದ್ಧಿಗಾಗಿ ಅವುಗಳನ್ನೊಳಗೊಂಡ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಮುಖ ಮುತ್ತಣ್ಣ ಕೋಮಾರ ಹೇಳಿದರು.

ನಿನ್ನೆ ಸಂಜೆ ಇಲ್ಲಿನ ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆದ ಉತ್ತರ ಕರ್ನಾಟಕ ಚಿಂತನ ಸಮಾವೇಶದಲ್ಲಿ ಮಾತನಾಡುತ್ತಾ ಅವರು ಹೀಗೆ ಹೇಳಿದರು. ಬೆಳಗಾವಿಯಲ್ಲಿ ನಡೆದ ಕಳೆದ ವಿಧಾನಸಭಾ ಅಧಿವೇಶನವನ್ನು ಕೇವಲ 10 ದಿನಗಳವರೆಗೆ ನಡೆಸಲಾಯಿತು. ಅದಕ್ಕಾಗಿ 34ಕೋಟಿ ರೂಗಳನ್ನು ಖರ್ಚು ಮಾಡಲಾಯಿತು. ಆದರೆ ಅದರಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳಾದ ಮಹದಾಯಿ ಯೋಜನೆ, ಕೃಷ್ಣಾ ಕೊಳ್ಳದ ಅಭಿವೃದ್ಧಿ ಮತ್ತು ರೈತರ ಸಮಸ್ಯೆ ಮುಂತಾದ ಸಮಸ್ಯೆಗಳ ಬಗ್ಗೆ ನಮ್ಮ ಯಾವ ಶಾಸಕರಾಗಲಿ, ಸಚಿವರಾಗಲಿ ಚರ್ಚಿಸಿ, ಅವುಗಳಲ್ಲಿ ಒಂದನ್ನೂ ಬಗೆಹರಿಸದೇ ನಮಗೆ ನಮ್ಮವರೇ ಅನ್ಯಾಯ ಮಾಡಿದ್ದಾರೆ ಎಂದರು.

ಸಕ್ಕರೆ ಕಾರ್ಖಾನೆಗಳ ಮಾಲಿಕರನ್ನು ವಿಧಾನಸಭೆಗೆ ಆರಿಸಿ ಕಳಿಸಿ, ನಾವು ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ಕೊಡಿ ಎಂದು ಕೇಳುತ್ತಿರುವುದು ಕುರಿ ಕಾಯಲು ತೋಳವನ್ನು ನೇಮಿಸಿದಂತಾಗಿದೆ ಎಂದರು. ಕಾರಣ ನಿಜವಾದ ರೈತರನ್ನು ವಿಧಾನಸಭೆಗೆ ಆರಿಸಿ ಕಳಿಸಬೇಕಾಗಿದೆ. ಅದಕ್ಕಾಗಿ ಇದೇ ತಿಂಗಳು 15ನೇ ತಾರೀಖಿನಂದು ಜಿಲ್ಲೆಯ ಕೂಡಲಸಂಗಮದಲ್ಲಿ ಜನಸಾಮಾನ್ಯರ ಪಕ್ಷವೊಂದನ್ನು ಸಂಘಟಿಸಲಾಗುತ್ತದೆ. ಅದಕ್ಕೆ ತಮ್ಮೆಲ್ಲರ ಸಹಕಾರ ಬೇಕು. ಅದರಿಂದ ಮಾತ್ರ ಸಾಲ ಮುಕ್ತ, ಸರಾಯಿ ಮುಕ್ತ ಮತ್ತು ಸಮೃದ್ಧ ರಾಜ್ಯವನ್ನು ನಿರ್ಮಿಸಬಹುದು ಎಂದು ಹೇಳಿದರು.

ಉಪನ್ಯಾಸಕರಾದ ನೀಲೇಶ ಬನ್ನೂರ ಮಾತನಾಡುತ್ತಾ, ಕರ್ನಾಟದಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್ ನಲ್ಲಿ ಶೇ.74ರಷ್ಟನ್ನು ನಮ್ಮ ಉತ್ತರ ಕರ್ನಾಟಕ ಉತ್ಪಾದನೆ ಮಾಡುತ್ತಿದ್ದರೂ, ನಮಗಾಗಿ ಸಿಗುತ್ತಿರುವುದು ಕೇವಲ ಶೇ 26ರಷ್ಟು ಮಾತ್ರ. ವಿಧಾನಸೌಧದಲ್ಲಿರುವ ನೌಕರದಾರರಲ್ಲಿ ಕೇವಲ ಶೇ.4ರಷ್ಟು ಜನರು ಮಾತ್ರ ನಮ್ಮ ಉತ್ತರ ಕರ್ನಾಟಕದವರಾಗಿದ್ದಾರೆ. ಹೀಗೇ ಅನೇಕ ವಿಷಯಗಳಲ್ಲಿ ನಮಗೆ ತಾರತಮ್ಯ ಮಾಡಲಾಗಿದೆ. ಉ.ಕದ ಅಭಿವೃದ್ಧಿಗಾಗಿ ಅನೇಕ ಸಮಿತಿಗಳು ನೀಡಿದ ವರದಿಗಳಾವೂ ಇಲ್ಲಿಯವರೆಗೆ ಸರಿಯಾಗಿ ಜಾರಿಯಾಗಿಲ್ಲ. ಹೀಗಾಗಿ 61 ವರ್ಷಗಳಾದರೂ ಉತ್ತರ ಕರ್ನಾಟಕ, ದಕ್ಷಣ ಕರ್ನಾಟಕದಷ್ಟು ಅಭಿವೃದ್ಧಿಯಾಗಿಲ್ಲ. ಇದಕ್ಕೆ ಪರಿಹಾರವೆಂದರೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿಕೊಳ್ಳುವುದೊಂದೆ ಎಂದರು.

ಈ ಕಾರ್ಯಕ್ರಮದಲ್ಲಿ ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಖ್ಯಾತ ಕಲಾವಿದರಾದ ಗುರುರಾಜ ಹೊಸಕೋಟಿ, ಪ್ರಕಾಶ ಜೈನ ಮತ್ತು ಪವಿತ್ರಾ ಜಕ್ಕಪ್ಪನವರನ್ನು ಸನ್ಮಾನಿಸಲಾಯಿತು. ಹಾಗೂ ಉತ್ತರ ಕರ್ನಾಟಕದ ಹೋರಾಟ ಸಮಿತಿ ಬೀಳಗಿ ತಾಲೂಕಾ ಘಟಕದ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿಯ ಪ್ರಮುಖರಾದ ನಾಗೇಶ ಗೋಲಶೆಟ್ಟಿ, ಶೇಖರ ಕಾಖಂಡಕಿ, ಎಸ್.ಎನ್, ಮುತ್ತಗಿ ಜಗತ್ತನಾಯಕ ಕಣವಿ, ರವಿಕುಮಾರ ನಾಗನಗೌಡ್ರ, ಕಿರಣ ರೇವಡಿಗಾರ, ಸಂತೋಷ ನಾಯ್ಕರ, ಕಿರಣ ಚೊಳಚಗುಡ್ಡ, ಚೌಕಿಮಠ ಮತ್ತು ಜಡಿಮಠ ಮುಂತಾದವರು ಇದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250554
Today
Yesterday
This Week
Last Week
This Month
Last Month
All days
9961
16742
76282
4062809
281649
395132
4250554
Your IP: 54.234.190.237
2018-01-18 16:02