Breaking News

ಯುವಜನೋತ್ಸವ ಕಾರ್ಯಕ್ರಮ ಉದ್ಘಾಟನೆ

Written by 
Published: 06 October 2017
29 times Last modified on Friday, 06 October 2017 13:51

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.06;

ವರದಿ : ಟಿ.ಗಣೇಶ್

ವಿ.ಎಸ್.ಕೆ.ವಿವಿಯಲ್ಲಿ ಅಂತರ್ ಮಹಾವಿದ್ಯಾಲಯ ಯುವಜನೋತ್ಸವ-2017 ಕಾರ್ಯಕ್ರಮವನ್ನು ಗಂಗಾವತಿ ಪ್ರಾಣೇಶ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿರು.

ಇಂದು ಬೆಳಿಗ್ಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಪ್ರಾಣೇಶ್ ಮಾತನಾಡಿ, ತಂತ್ರಜ್ಞಾನವನ್ನು ಬಳಕೆ ಮಾಡಿ, ವಿದ್ಯಾರ್ಥಿಗಳು ಪುಸ್ತಕಗಳನ್ನು ಮರೆತು, ಯಾವಾಗಲೂ ಮೊಬೈಲ್ ಫೋನ್‍ಗಳನ್ನು ವೀಕ್ಷಿಸುತ್ತಿರುತ್ತಾರೆ. ಈ ತಂತ್ರಜ್ಞಾನ ಬಳಕೆಯಿಂದ ಯುವ ಜನತೆಗೆ ತೊಂದರೆ ತಪ್ಪಿದ್ದಲ್ಲ. ಈ ಸಮಯವನ್ನು ನೀವು ಪುಸ್ತಕ, ಸಾಹಿತ್ಯ, ಕಥೆ, ಕಾದಂಬರಿಗಳನ್ನು ಓದುವುದರಲ್ಲಿ ಬಳಸಿಕೊಳ್ಳಿ, ಪುಸ್ತಕಗಳ ಜೊತೆ ಸ್ನೇಹ ಬೆಳೆಸಿಕೊಳ್ಳಿ ಎಂದರು.  

ನೀವು ಸೆಲ್ಫಿ ತೆಗೆಯುವುದನ್ನು ಬಿಟ್ಟು ಇನ್ನೊಬ್ಬರು ನಿಮ್ಮ ಜೊತೆ ಸೆಲ್ಫಿ ತೆಗೆಸುವ ಹಂತಕ್ಕೆ ಬೆಳೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನೀವು ಪುಸ್ತಕಗಳನ್ನು ಅಭ್ಯಾಸ ಮಾಡಿದರೆ ಜೀವನದಲ್ಲಿ ನನ್ನ ತರ ಮುಂದೆ ಬರುತ್ತೀರ ಎಂದು ಉದಾಹರಣೆ ನೀಡಿದರು.

ನಿಮ್ಮ ಅಟೋಗ್ರಾಫ್ ಜನರು ಕೇಳುವ ಹಂತಕ್ಕೆ ಪ್ರತಿ ವಿದ್ಯಾರ್ಥಿಯು ಬೆಳೆಯಬೇಕು ಎಂದರು.  ಈ ವಿಶ್ವವಿದ್ಯಾಲಯದಲ್ಲಿ  3000 ವಿಧ್ಯಾರ್ಥಿಗಳ ಸಂಖ್ಯೆ ಇದೆ ಎಂದು ತಿಳಿದ ಪ್ರಾಣೇಶ್, ಉನ್ನತ ವಿದ್ಯಾಭ್ಯಾಸದಲ್ಲಿ ಯುವಕರಿಗೆ ಹೆಚ್ಚಿನ ಆಸಕ್ತಯಿದೆ ಎಂದು ಹೇಳಿದರು. ಮತ್ತು ವಿಧ್ಯಾರ್ಥಿಗಳ ಸಂಖ್ಯೆಯು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಲೆಂದು ಶುಭಕೋರಿದರು.

ಯುವಜನೋತ್ಸವಕ್ಕಾಗಿ ಅನೇಕ ವಿದ್ಯಾರ್ಥಿಗಳು ವಿವಿಧ ಭಾಗಗಳಿಂದ ಆಗಮಿಸಿದ್ದರು. ಒಟ್ಟು 40 ಕಾಲೇಜುಗಳಿಂದ 600 ವಿದ್ಯಾರ್ಥಿಗಳು ಈ ಯುವಜನೋತ್ಸವದಲ್ಲಿ ಭಾಗವಹಿಸಿದ್ದಾರೆಂದು ಕುಲಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಪ್ರೊ.ಸಿ.ಬಿ.ಹೊನ್ನೂ ಸಿದ್ದಾರ್ಥ, ನಿಷ್ಠಿರುದ್ರಪ್ಪ, ವೆಂಕಟೇಶ್ ಡ್ಯಾಗಿ, ವಿ.ವಿ ಕುಲಪತಿ ಎಮ್.ಎಸ್.ಸುಭಾಷ್, ಪ್ರೊ. ಎಸ್,ಎ, ಪಾಟೀಲ್, ಡಾ|| ಶಾಂತಾನಾಯ್ಕ ಎನ್, ಪ್ರೊ.ಟಿ.ಸುರೇಶ್, ಇತರರು ಭಾಗವಹಿಸಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3273942
Today
Yesterday
This Week
Last Week
This Month
Last Month
All days
2463
6468
22785
3222209
98432
263209
3273942
Your IP: 54.158.55.5
2017-10-18 09:11