Breaking News

ಏಕದಿನ ಸರಣಿಯ ಅಂತಿಮ ಪಂದ್ಯ : ಟಾಸ್ ಗೆದ್ದು ಆಸ್ಟ್ರೇಲಿಯಾ ಬ್ಯಾಟಿಂಗ್

ಕೆ.ಎನ್.ಪಿ.ವಾರ್ತೆ,ನಾಗ್ಪುರ್,ಅ.1;

ನಾಗ್ಪುರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಪಂದ್ಯಗಳ ಸರಣಿ ಅಂತಿಮ ಘಟ್ಟಕ್ಕೆ ತಲುಪಿದೆ. ಇಂದು ಅಂತಿಮ ಪಂದ್ಯ ನಾಗ್ಪುರದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಐಸಿಸಿ ರ್ಯಾಂಕಿಂಗ್‍ನಲ್ಲಿ ನಂಬರ್ 1 ಪಟ್ಟಕ್ಕೆ ಏರಬೇಕೆಂಬ ಕನಸು ಹೊತ್ತಿರುವ ವಿರಾಟ್ ಕೊಹ್ಲಿ, ಇಂದಿನ ಪಂದ್ಯ ಗೆದ್ದು ಸರಣಿ ಜಯಿಸುವ ತವಕದಲ್ಲಿದ್ದಾರೆ.

ಟಾಸ್ ನಂತರ ಮಾತನಾಡಿದ ವಿರಾಟ್ ಕೊಹ್ಲಿ ಸತತ 3 ಪಂದ್ಯಗಳಿಂದ ಸೋಲು ಕಂಡಿದ್ದ ಆಸ್ಟ್ರೇಲಿಯಾ ಬೆಂಗಳೂರು ಪಂದ್ಯದಲ್ಲಿ ಮತ್ತೆ ಹೋರಾಟ ಲಯಕ್ಕೆ ಮರಳಿದ್ದಾರೆ, ನಾಗ್ಪುರ ಪಿಚ್ ಕೂಡ ಬ್ಯಾಟಿಂಗ್‍ಗೆ ಸೂಕ್ತ ಪಿಚ್ ಆಗಿದ್ದು ಇಲ್ಲೂ ಕೂಡ 300ಕ್ಕೂ ಹೆಚ್ಚು ರನ್‍ಗಳ ಹೊಳೆ ಹರಿದು ಬರಲಿದೆ ಎಂದರು.


Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3273910
Today
Yesterday
This Week
Last Week
This Month
Last Month
All days
2431
6468
22753
3222209
98400
263209
3273910
Your IP: 54.158.55.5
2017-10-18 09:06