Breaking News

ಮೇವು ಹಗರಣ : ಲಾಲೂಗೆ ಶಿಕ್ಷೆ ಪ್ರಮಾಣ ಇಂದು ಪ್ರಕಟ 

ಕೆ.ಎನ್.ಪಿ.ವಾರ್ತೆ,ರಾಂಚಿ,ಜ.03;

900 ಕೋಟಿ ರೂ.ಗಳ ಮೇವು ಹಗರಣದಲ್ಲಿ ದೋಷಿಯಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಗೆ ಶಿಕ್ಷೆ ಪ್ರಮಾಣ ಇಂದು ಪ್ರಕಟವಾಗಲಿದೆ.

ಲಾಲೂ ಪ್ರಸಾದ್ ಸೇರಿದಂತೆ 15 ಆರೋಪಿಗಳ ಶಿಕ್ಷೆ ಪ್ರಮಾಣವನ್ನು ಇಂದು ಜಾರ್ಖಂಡ್ ನ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯ ಪ್ರಕಟಿಸಲಿದೆ. ಈ ಹಿಂದೆ ಡಿಸೆಂಬರ್ 23ರಂದು, 900 ಕೋಟಿ ರೂ.ಗಳ ಮೇವು ಹಗರಣದ 2ನೇ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮತ್ತು ಇತರೆ 15 ಆರೋಪಿಗಳನ್ನು ದೋಷಿಗಳು ಎಂದು ರಾಂಚಿ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು ಅಂತಿಮ ತೀರ್ಪು ನೀಡಿ, ಶಿಕ್ಷೆ ಪ್ರಮಾಣವನ್ನು ಜನವರಿ 3ಕ್ಕೆ ಪ್ರಕಟಿಸಲಾಗುವುದು ಎಂದು ಆದೇಶ ಹೊರಡಿಸಿದ್ದರು.

ಇದೇ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಬಿಹಾರದ ಮಾಜಿ ಸಿಎಂ ಜಗನ್ನಾಥ ಮಿಶ್ರಾ ಮತ್ತು ಇತರೆ 7 ಜನರನ್ನು ಸಿಬಿಐ ಕೋರ್ಟ್ ಖುಲಾಸೆಗೊಳಿಸಿತ್ತು, ಒಟ್ಟು 6 ಪ್ರಕರಣಗಳಲ್ಲಿ ಎರಡು ಪ್ರಕರಣಕ್ಕೆ ತೀರ್ಪು ಪ್ರಕಟಿಸಿದೆ. ಇನ್ನುಳಿದ 4 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಲಾಲೂ ಪ್ರಸಾದ್ ಯಾದವ್ ಅವರಿಗೆ ಎಷ್ಟು ಪ್ರಮಾಣ ಶಿಕ್ಷೆ ಎನ್ನುವುದು ಇಂದು ತಿಳಿಯಲಿದೆ. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250372
Today
Yesterday
This Week
Last Week
This Month
Last Month
All days
9779
16742
76100
4062809
281467
395132
4250372
Your IP: 54.234.190.237
2018-01-18 15:52