Breaking News

ಡಾ.ಮನಮೋಹನ್ ಸಿಂಗ್‍ಗೆ ಇಂದಿರಾಗಾಂಧಿ ಶಾಂತಿ ಪ್ರಶಸ್ತಿ

ಕೆ.ಎನ್.ಪಿ.ವಾರ್ತೆ,ನವದೆಹಲಿ,ನ.20;

ಮಾಜಿ ಪ್ರಧಾನಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ಧುರೀಣ ಡಾ.ಮನಮೋಹನ್ ಸಿಂಗ್ ಅವರಿಗೆ 2017ನೇ ಸಾಲಿನ ಇಂದಿರಾಗಾಂಧಿ ಶಾಂತಿ ಮತ್ತು ಅಭಿವೃದ್ಧಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.

2004 ರಿಂದ 2014ರವರೆಗೆ ಹತ್ತು ವರ್ಷಗಳ ಕಾಲ ಅವರು ದೇಶಕ್ಕೆ ನೀಡಿದ ಸಮರ್ಥ ನಾಯಕತ್ವ ಸೇವೆಯನ್ನು ಪರಿಗಣಿಸಿ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ನೇತೃತ್ವದ ಆಯ್ಕೆ ಸಮಿತಿಯು, ಮನಮೋಹನ್‌ ಸಿಂಗ್ ಅವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಇಂದಿರಾಗಾಂಧಿ ಸ್ಮಾರಕ ಟ್ರಸ್ಟ್ ಘೋಷಿಸಿದೆ. 

ಡಾ.ಮನಮೋಹನ್ ಸಿಂಗ್ ಅವರು ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರು ನೆರೆಯ ರಾಷ್ಟ್ರಗಳು ಹಾಗೂ ವಿಶ್ವದ ಪ್ರಮುಖ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ವೃದ್ದಿಸಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಜಾತಿ, ಧರ್ಮ ಅಥವಾ ಭಾಷೆಯ ಭೇದವಿಲ್ಲದೇ ಎಲ್ಲ ಜನಸಾಮಾನ್ಯರ ಭದ್ರತೆ ಮತ್ತು ಕಲ್ಯಾಣಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಟ್ರಸ್ಟ್ ನ ಕಾರ್ಯದರ್ಶಿ ಸುಮನ್ ದುಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770720
Today
Yesterday
This Week
Last Week
This Month
Last Month
All days
5892
14978
20870
3647859
196947
189062
3770720
Your IP: 54.221.76.68
2017-12-18 08:44