Breaking News

ಜಾಗತಿಕ ಉದ್ಯಮಶೀಲತಾ ಶೃಂಗಸಭೆ ಉದ್ಘಾಟನೆ

ಕೆ.ಎನ್.ಪಿ.ವಾರ್ತೆ,ಹೈದರಾಬಾದ್,ನ.28;

ಜಾಗತಿಕ ಉದ್ಯಮಶೀಲತಾ ಶೃಂಗಸಭೆ ಉದ್ಘಾಟನೆಯು ಇಂದು ಜರುಗಿತು.

ಹೈದರಾಬಾದ್‍ನಲ್ಲಿ ಆರಂಭವಾಗಿರುವ 8ನೇ ವಾರ್ಷಿಕ ಜಾಗತಿಕ ಉದ್ಯಮಶೀಲತಾ ಶೃಂಗಸಭೆ (ಜಿಇಎಸ್) ಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಇವಾಂಕಾ ಟ್ರಂಪ್ ಉದ್ಘಾಟಿಸಿದರು. ರೋಬೋಟ್ ಗೆ ತಮ್ಮ ಬೆರಳಚ್ಚು ನೀಡುವ ಮೂಲಕ ಮೋದಿ ಮತ್ತು ಇವಾಂಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಶೃಂಗಸಭೆಯಲ್ಲಿ ಪ್ರಾಸ್ತವಿಕ ಭಾಷಣ ಮಾಡಿದ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಪುತ್ರಿ ಹಾಗೂ ಯಶಸ್ವಿ ಮಹಿಳಾ ಉದ್ಯಮಿ ಇವಾಂಕಾ ಟ್ರಂಪ್, ವನಿತೆಯರ ನೇತೃತ್ವದ ಉದ್ಯಮಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.

ಲಿಂಗ ಆಧಾರಿತ ಉದ್ಯಮಶೀಲತೆಯಲ್ಲಿನ ಅಂತರವನ್ನು ಕೊನೆಗಾಣಿಸುವುದರಿಂದ ವಿಶ್ವಾದ್ಯಂತ ಜಾಗತಿಕ ಜಿಡಿಪಿಯಲ್ಲಿ (ಒಟ್ಟು ಸ್ಥಳೀಯ ಉತ್ಪನ್ನ) ಶೇ.2ರಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದು ವಿಶ್ಲೇಷಣೆ ಮಾಡಿದರು. ಮಹಿಳಾ ಉದ್ಯಮಿಗಳಿಗೆ ಬಂಡವಾಳ, ಸಂಪರ್ಕ ಜಾಲಗಳು, ಮಾರ್ಗದರ್ಶಕರು ಮತ್ತು ಸಮಾನ ಕಾನೂನುಗಳು ಲಭ್ಯವಾಗಬೇಕು ಎಂದು ಪ್ರತಿಪಾದಿಸಿದರು. ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ಹೆಚ್ಚಿನ ಒತ್ತು ನೀಡುವುದರಿಂದ ನಮ್ಮ ಸಮಾಜಕ್ಕೆ, ನಮ್ಮ ಆರ್ಥಿಕತೆಗೆ ಹಾಗೂ ಆಯಾ ದೇಶಗಳಿಗೆ ತುಂಬಾ ಪ್ರಯೋಜನವಾಗುತ್ತದೆ ಎಂದು ಇವಾಂಕಾ ವಿಮರ್ಶಿಸಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770775
Today
Yesterday
This Week
Last Week
This Month
Last Month
All days
5947
14978
20925
3647859
197002
189062
3770775
Your IP: 54.221.76.68
2017-12-18 08:48