Breaking News

ಜನರನ್ನು ಬಿಜೆಪಿ ವಿಭಜಿಸುತ್ತದೆ ಆದರೆ, ಕಾಂಗ್ರೆಸ್ ಪ್ರೀತಿಸುತ್ತದೆ : ರಾಹುಲ್ ಗಾಂಧಿ

ಕೆ.ಎನ್.ಪಿ.ವಾರ್ತೆ, ನವದೆಹಲಿ, ಡಿ.16;

ಜನರನ್ನು ಬಿಜೆಪಿ ವಿಭಜಿಸುತ್ತದೆ ಆದರೆ, ಕಾಂಗ್ರೆಸ್ ಪ್ರೀತಿಸುತ್ತದೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ನೂತನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನವದೆಹಲಿಯ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿ, "ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಯೇ ನನ್ನ ಮೊದಲ ಆಧ್ಯತೆ. ಜನರನ್ನು ಬಿಜೆಪಿ ವಿಭಜಿಸುತ್ತದೆ ಆದರೆ, ಕಾಂಗ್ರೆಸ್ ಪ್ರೀತಿಸುತ್ತದೆ" ಎಂದು ಪ್ರಧಾನಿ ನರೇಂಧ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜಕಾರಣ ಎಂದರೆ ಜನರ ಸೇವೆ ಮಾಡುವುದು. ಬಿಜೆಪಿ ಪ್ರಕಾರ ಜನರನ್ನು ವಿಭಜಿಸುವುದೇ ರಾಜಕಾರಣ. ಆಹಾರದ ವಿಷಯದಲ್ಲಿ ಜನರನ್ನು ಕತ್ತರಿಸಿ ಹಾಕಲಾಗುತ್ತಿದ್ದು, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಯೇ ನನ್ನ ಮೊದಲ ಆಧ್ಯತೆ.  ಇಂದಿನ ಪ್ರಧಾನಿ ದೇಶವನ್ನು ಹಿಂದಕ್ಕೆ ಕರೆದೊಯ್ಯುತ್ತಿದ್ದಾರೆ. ಕಾಂಗ್ರೆಸ್ ದ್ವೇಷದ ರಾಜಕಾರಣವನ್ನು ಎದುರಿಸುತ್ತದೆ ಎಂದು ತಮ್ಮ ಭಾಷಣದಲ್ಲಿ  ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4274373
Today
Yesterday
This Week
Last Week
This Month
Last Month
All days
808
15484
100101
4062809
305468
395132
4274373
Your IP: 54.167.126.106
2018-01-20 01:17