Breaking News

ಜಯಾ ಪ್ರಥಮ ಪುಣ್ಯತಿಥಿ : ಗೌರವ, ಶ್ರದ್ಧಾಂಜಲಿ ಸಮರ್ಪಣೆ

ಕೆ.ಎನ್.ಪಿ.ವಾರ್ತೆ,ಚನ್ನೈ, ಡಿ.5;

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಪ್ರಥಮ ಪುಣ್ಯತಿಥಿಯನ್ನು ಇಂದು ಆಚರಿಸಲಾಯಿತು. 

ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ ನಾಯಕಿಗೆ ಗೌರವ-ಶ್ರದ್ಧಾಂಜಲಿ ಸಮರ್ಪಿಸಿದರು. ರಾಜಧಾನಿ ಚೆನ್ನೈನ ಮರೀನಾ ಬೀಚ್‍ನಲ್ಲಿರುವ ಪುರುಚ್ಚಿ ತಲೈವಿ ಜಯಾ ಅವರ ಸಮಾಧಿಗೆ ಇಂದು ಮುಂಜಾನೆಯಿಂದಲೇ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಭಿಮಾನಿಗಳು ಅಶ್ರು ತರ್ಪಣ ಸಲ್ಲಿಸಿದರು.

ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ, ಸಂಪುಟ ಸಹೋದ್ಯೋಗಿಗಳು, ಪಕ್ಷದ ಮುಖಂಡರು, ಪಕ್ಷದ ಉಚ್ಚಾಟಿತ ನಾಯಕ ಟಿ.ಟಿ.ವಿ.ದಿನಕರನ್, ಜಯಾರ ಸೋದರನ ಪುತ್ರಿ ದೀಪಾ ಜಯಕುಮಾರ್ ಸೇರಿದಂತೆ ಅನೇಕ ಗಣ್ಯರು ಜಯಾ ಸಮಾಧಿಗೆ ಪುಷ್ಪ ನಮನ ಸಮರ್ಪಿಸಿದರು.

ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ, ಕಳೆದ ವರ್ಷ ಅನಾರೋಗ್ಯದಿಂದ ಚೆನ್ನೈನ ಅಪೋಲೋ ಆಸ್ಪತ್ರೆಗೆ ಸೇರಿದ್ದರು. ದೀರ್ಘ ಕಾಲದ ಚಿಕಿತ್ಸೆ ಫಲಕಾರಿಯಾಗದೇ ಡಿ.5ರಂದು ನಿಧನರಾದರು. ಅಮ್ಮನನ್ನು ಕಳೆದುಕೊಂಡ ತಮಿಳುನಾಡು ಶೋಕದ ಮಡುವಿನಲ್ಲಿ ಮುಳುಗಿತ್ತು. ತಮಿಳುನಾಡಿನ ಮೆಚ್ಚಿನ ಮುಖ್ಯಮಂತ್ರಿಯನ್ನು ಮರೀನಾ ಬೀಚ್ ಬಳಿ ಅಂತಿಮ ಸಂಸ್ಕಾರ ಮಾಡಲಾಗಿತ್ತು.

ಇಂದು ಅವರ ಪುಣ್ಯ ತಿಥಿ ಹಿನ್ನಲೆಯಲ್ಲಿ ಜನಸಾಗರವೇ ಸಮಾಧಿಯತ್ತ ಹರಿದುಬರುತ್ತಿದೆ. ಅವರ ಅಭಿಮಾನಿಗಳು ಸಮಾಧಿ ಬಳಿ ಪೂಜೆ ಸಲ್ಲಿಸಿದರು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770675
Today
Yesterday
This Week
Last Week
This Month
Last Month
All days
5847
14978
20825
3647859
196902
189062
3770675
Your IP: 54.221.76.68
2017-12-18 08:40