Breaking News

ಸಂಘಪರಿವಾರ ಮತ್ತು ಬಿಜೆಪಿ ನನ್ನ ವ್ಯಕ್ತಿತ್ವವನ್ನು ಕೀಳಾಗಿ ಚಿತ್ರಿಸುವುದಕ್ಕಾಗಿ ಬಾಲಿಶ ಪ್ರಯತ್ನಗಳನ್ನು ಮಾಡುತ್ತಿವೆ : ಜಿಗ್ನೆಶ್

ಕೆ.ಎನ್.ಪಿ.ವಾರ್ತೆ,ನವದೆಹಲಿ,ಜ.05;

ಸಂಘ ಪರಿವಾರ ಮತ್ತು ಬಿಜೆಪಿ ನನ್ನ ವ್ಯಕ್ತಿತ್ವವನ್ನು ಕೀಳಾಗಿ ಚಿತ್ರಿಸುವುದಕ್ಕಾಗಿ ಬಾಲಿಶ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ವಡ್ಗಾಮ್ ಶಾಸಕ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.

ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಬಾಲಿಶ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿ ಮತ್ತು ಆರ್.ಎಸ್.ಎಸ್ ನನ್ನ ತೇಜೋವಧೆ ಮಾಡುತ್ತಿದೆ. ನನ್ನ ವ್ಯಕ್ತಿತ್ವವನ್ನು ಕೀಳಾಗಿ ಚಿತ್ರಿಸುವುದಕ್ಕಾಗಿ ಬಾಲಿಶ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ತಮ್ಮ ಮೇಲೆ ಕಾರಣವೇ ಇಲ್ಲದೆ ಎಫ್.ಐಆರ್ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ನಾನು ಪ್ರಚೋದನಾತ್ಮಕವಾಗಿ ಒಂದೇ ಒಂದು ಮಾತನ್ನೂ ಆಡಿರಲಿಲ್ಲ ಎಂದು ಅವರು ಹೇಳಿದರು.

ಭೀಮಾ ಕೊರೆಗಾಂವ್ ವಿಜಯೋತ್ಸವದ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ, ಜಿಗ್ನೇಶ್ ಮತ್ತು ಜೆಎನ್ ಯು ವಿದ್ಯಾರ್ಥಿ ಉಮರ್ ಖಲೀದ್ ವಿರುದ್ಧ ಎಫ್.ಐಆರ್ ದಾಖಲಿಸಲಾಗಿತ್ತು. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250364
Today
Yesterday
This Week
Last Week
This Month
Last Month
All days
9771
16742
76092
4062809
281459
395132
4250364
Your IP: 54.234.190.237
2018-01-18 15:51