Breaking News

ಯೂಸೂಫ್ ಪಠಾಣ್‍ ಐದು ತಿಂಗಳುಗಳ ಅಮಾನತು ಶಿಕ್ಷೆ ಜ.14ಕ್ಕೆ ಪೂರ್ಣ

ಕೆ.ಎನ್.ಪಿ.ವಾರ್ತೆ,ಮುಂಬೈ,ಜ.09;

ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಟೀಂ ಇಂಡಿಯಾದ ಆಲ್ ರೌಂಡರ್ ಯೂಸೂಫ್ ಪಠಾಣ್ ಅವರು ಐದು ತಿಂಗಳು ನಿಷೇಧಕ್ಕೊಳಗಾಗಿದ್ದರು, ಈ ಶಿಕ್ಷೆ ಇದೇ ಜ.14ರಂದು ಪೂರ್ಣಗೊಳ್ಳಲಿದೆ.

ಟೀಂ ಇಂಡಿಯಾದ ಆಲ್ ರೌಂಡರ್ ಆಗಿರುವ ಯೂಸೂಫ್ ಪಠಾಣ್‍ ಐದು ತಿಂಗಳುಗಳ ಕಾಲ ನಿಷೇಧಕ್ಕೊಳಗಾಗಿದ್ದು, ಅಂತರರಾಷ್ಟ್ರೀಯ, ದೇಶಿಯ ಪಂದ್ಯಗಳನ್ನು ಆಡುವಂತಿಲ್ಲ ಎಂದು ಬಿಸಿಸಿಐ ಹೇಳಿತ್ತು2017-18ನೇ ಸಾಲಿನಲ್ಲಿ ಬರೋಡ ತಂಡವನ್ನು ಪ್ರತಿನಿಧಿಸಿ ಆಂಧ್ರಪ್ರದೇಶ ವಿರುದ್ಧ ಏಕೈಕ ಪಂದ್ಯವನ್ನಾಡಿದ್ದ ಯೂಸೂಫ್, ಉದ್ದೀಪನಾ ಮದ್ದು ಸೇವಿಸಿರುವುದು ಸಾಭೀತಾಗಿದ್ದ ಹಿನ್ನಲೆಯಲ್ಲಿ, ಬಿಸಿಸಿಐ, ಕಳೆದ ಆಗಸ್ಟ್ 15ರಂದು ಯೂಸುಫ್ ಮೇಲೆ ನಿಷೇಧ ಹೇರಿದ್ದು, 5 ತಿಂಗಳ ನಿಷೇಧ ಖಾಯಂ ಮಾಡಿರುವುದರಿಂದ ಇದೇ ಜನವರಿ 14 2018ಕ್ಕೆ ಅವರ ಅಮಾನತು ಶಿಕ್ಷೆ ಪೂರ್ಣವಾಗಲಿದೆ. 

ಹೀಗಾಗಿ ಯೂಸುಫ್ ಮುಂಬರುವ ಐಪಿಎಲ್ ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನವದೆಹಲಿಯಲ್ಲಿ ನಡೆದ ಟಿ20 ಪಂದ್ಯದ ವೇಳೆ ನಡೆದ ಡೋಪಿಂಗ್ ಪರೀಕ್ಷೆಯಲ್ಲಿ ಪಠಾಣ್ ಉದ್ದೀಪನ ಮದ್ದು ಸೇವಿಸಿದ ವಿಷಯ ಬೆಳಕಿಗೆ ಬಂದಿತ್ತು. ಉದ್ದೀಪನ ಮದ್ದು ಸೇವನೆ ಪರೀಕ್ಷೆಗೊಳಪಡಿಸಿದಾಗ ಕೆಮ್ಮು ಔಷಧಿಯಲ್ಲಿದ್ದ ಟೆರ್‍‍ಬ್ಯುಟಲೈನ್ (Terbutaline) ಎಂಬ ಪದಾರ್ಥ ಪಠಾಣ್ ಮೂತ್ರದಲ್ಲಿ ಕಂಡು ಬಂದಿತ್ತು ಎಂದು ವರದಿಗಳಿಂದ ತಿಳಿದುಬಂದಿದೆ. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250526
Today
Yesterday
This Week
Last Week
This Month
Last Month
All days
9933
16742
76254
4062809
281621
395132
4250526
Your IP: 54.234.190.237
2018-01-18 16:00